ರಾಜ್ಯದ ಜನತೆಗೆ ಮತ್ತೊಂದು ಶಾಕ್.!! ‘ಕಾವೇರಿ’ ನೀರಿನ ದರ ಏರಿಕೆ

ಹಲೋ ಸ್ನೇಹಿತರೇ, ಬೆಂಗಳೂರಿನ ಜನತೆಗೆ ರಾಜ್ಯ ಸರ್ಕಾರ ಶಾಕ್‌ ನೀಡಿದ್ದು, ಬೆಂಗಳೂರಿನಲ್ಲಿ ನೀರಿನ ದರ ಏರಿಕೆ ಮಾಡಲಾಗುವುದು ಎಂದು ಬೆಂಗಳೂರು ಜಲಮಂಡಳಿ ಅಧ್ಯಕ್ಷ ರಾಮ್ ಪ್ರಸಾತ್ ಮನೋಹರ್ ತಿಳಿಸಿದ್ದಾರೆ. ನೀರಿನ ದರ ಪರಿಷ್ಕರಣೆ ಸಂಬಂಧ ಸಾರ್ವಜನಿಕ ಆಕ್ಷೇಪಣೆಗೆ ಈ ಬಾರಿ ಅವಕಾಶ ನೀಡಲಾಗಿತ್ತು.

Kaveri Water Bill hike
Kaveri Water Bill hike

ಗೃಹ, ಗೃಹೇತರರ ನೀರಿನ ಬಳಕೆದಾರರು, ಹೋಟೆಲ್, ಅಪಾರ್ಟ್ಮೆಂಟ್ ಅಸೋಸಿಯೇಷನ್ ಜೊತೆ ಸಭೆ ನಡೆಸಲಾಗಿದ್ದು ಎಲ್ಲರ ಅಭಿಪ್ರಾಯ ಸಂಗ್ರಹಿಸಿ ನೀರಿನ ದರ ಪರಿಷ್ಕರಣೆ ಮಾಡಲಾಗುವುದು ಎಂದು ಅವರು ತಿಳಿಸಿದ್ದಾರೆ.

ಕಳೆದ 10 ವರ್ಷಗಳಲ್ಲಿ ವಿದ್ಯುತ್‌ ದರವು ಪರಿಷ್ಕರಣೆಯನ್ನು ಮಾಡಲಾಗಿದ್ದು, ನೀರಿನ ದರವು ಮಾತ್ರ ಪರಿಷ್ಕರಣೆಯನ್ನು ಮಾಡಿಲ್ಲ ಹೀಗಾಗಿಯೇ ಬೆಂಗಳೂರಿನಲ್ಲಿ ನೀರಿನ ದರವು ಹೆಚ್ಚಳ ಮಾಡಲು ನಿರ್ಧರಿಸಲಾಗಿದೆ ಎಂದು ಹೇಳಿದ್ದಾರೆ.

ಇದನ್ನು ಓದಿ: ರಾಜ್ಯದ `SC-ST’ ಯವರಿಗೆ ಗುಡ್ ನ್ಯೂಸ್.!! ವಕೀಲರ ನೇಮಕಾತಿಯಲ್ಲಿ ಶೇ. 24ರಷ್ಟು ಮೀಸಲಾತಿ ಜಾರಿ

ಜಲಮಂಡಳಿಯ ಅದಾಯಕ್ಕಿಂತಲೂ ವೆಚ್ಚವನ್ನು ಹೆಚ್ಚಾಗಿದೆ. ಗೃಹ ಬಳಕೆಯನ್ನು ನೀರಿನ ದರವನ್ನು ಶೇ. 30 ರಿಂದ 40 ಹಾಗೂ ವಾಣಿಜ್ಯ ಬಳಕೆಗೆ ಶೇ. 45 ರಷ್ಟು ದರವು ಹೆಚ್ಚಳಕ್ಕೆ ಜಲಮಂಡಳಿಯು ಪ್ರಸ್ತಾವನೆ ಸಲ್ಲಿಸಿದೆ ಎಂದು ಹೇಳಲಾಗಿದೆ.

2014 ರ ನವೆಂಬರ್‌-2024 ರ ಮಾರ್ಚ್ ನಡುವೆಯೇ ವಿದ್ಯುತ್‌ ವೆಚ್ಚ ಶೇ.107.3ರಷ್ಟು ಹೆಚ್ಚಾಗಿದೆ. ಶೇ.122.5 ನಿರ್ವಹಣಾ ವೆಚ್ಚ ಹಾಗೂ ಶೇ.61.3 ವೇತನ ಮತ್ತು ಪಿಂಚಣಿ ವೆಚ್ಚ ಹೆಚ್ಚಳವಾಗಿದೆ. ಜಲಮಂಡಳಿಯ ಪ್ರತಿ ತಿಂಗಳ ವೆಚ್ಚ 170 ಕೋಟಿ ರೂ. ಆಗಿದ್ದರೆ, ಸಂಗ್ರಹಣೆಯಾಗುತ್ತಿರುವ ಪ್ರತಿ ತಿಂಗಳ ಆದಾಯ ಕೇವಲ 129 ಕೋಟಿ ರೂ. ಮಾತ್ರ ಬರುತ್ತಿದೆ.

ಇತರೆ ವಿಷಯಗಳು:

ಜ.1ರಿಂದ ಈ ನಿಯಮ ಫುಲ್ ಚೇಂಜ್.!! ರೀಚಾರ್ಚ್‌ ಬೆಲೆ ಮತ್ತೆ ಹೆಚ್ಚಳ

ಕೆಎಸ್​ಆರ್​ಟಿಸಿ, ಬಿಎಂಟಿಸಿ ಬೃಹತ್ ಮುಷ್ಕರ.!! ಈ ಬೇಡಿಕೆ ಈಡೇರಿಸುವಂತೆ ಎಚ್ಚರಿಕೆ

Leave a Comment

rtgh