ಹಲೋ ಸ್ನೇಹಿತರೇ, ನಿಮ್ಮ ಹಣವನ್ನು ಸುರಕ್ಷಿತವಾಗಿ ಹೂಡಿಕೆಯನ್ನು ಮಾಡಲು ಬಯಸಿದ್ದರೆ ನಿಮಗೆ ಉತ್ತಮ ಮಾರ್ಗವೆಂದ್ರೆ ಅದು ಅಂಚೆ ಕಚೇರಿಯ ಎಂಐಎಸ್ ಯೋಜನೆ. ನಿಮಗೆ ಈ ಪೋಸ್ಟ್ ಆಫೀಸ್‌ನ ಈ ಸೂಪರ್‌ಹಿಟ್ ಆದ ಸ್ಕೀಮ್ ಆಗಿದೆ. ನೀವು ಇದ್ರ ಮೂಲಕವಾಗಿ ಮನೆಯಲ್ಲಿ ಇದ್ದುಕೊಂಡು 5,55,000 ರೂ ಗಳಿಸಬಹುದು ಅದು ಹೇಗೆ ಇಲ್ಲಿದೆ ಮಾಹಿತಿ.

ಪೋಸ್ಟ್ ಆಫೀಸ್ MIS ಯೋಜನೆಯಲ್ಲಿ ನಿಮ್ಮ ಹಣವು ಸಂಪೂರ್ಣವಾಗಿ ಸುರಕ್ಷಿತವಾಗಿರುತ್ತದೆ ಹಾಗೂ ನೀವು ಮಾಸಿಕ ಬಡ್ಡಿ ದರದ ಆದಾಯವನ್ನು ಸಹ ಪಡೆಯಬಹುದು.ಇದನ್ನು ನೀವು ಹತ್ತಿರದ ಪೋಸ್ಟ್ ಆಫೀಸ್‌ನಲ್ಲಿ MIS ಖಾತೆಯನ್ನು ತರೆಯಬಹುದು. ಖಾತೆಯನ್ನು ಏಕಾಂಗಿಯಾಗಿ ಹಾಗೂ ಜಂಟಿಯಾಗಿ ಕೂಡ ತೆರೆಯಬಹುದು. ನಿಮ್ಮ ಪತ್ನಿ ಮತ್ತು ಸಹೋದರ ಅಥವಾ ಯಾವುದೇ ಕುಟುಂಬದ ಸದಸ್ಯರೊಂದಿಗೆ ನೀವು ಈ ಖಾತೆಯನ್ನು ತೆರೆದ್ರೆ ನಿಮಗೆ ಠೇವಣಿ ಮಿತಿಯೂ ಹೆಚ್ಚಾಗುತ್ತದೆ. ಇದರಿಂದಲೇ ನಿಮಗೆ ಹೆಚ್ಚಿನ ಪ್ರಯೋಜನ ಸಿಗುತ್ತದೆ.
ಪ್ರತಿ ತಿಂಗಳೂ ಬಡ್ಡಿಯಿಂದ ಸಂಪಾದನೆ
ಪೋಸ್ಟ್ ಆಫೀಸ್ ಮಾಸಿಕ ಉಳಿತಾಯ ಯೋಜನೆಯ ಠೇವಣಿ ಯೋಜನೆ ಆಗಿದೆ. ಇದರಲ್ಲಿ ನಿಮ್ಮ ಮೊತ್ತದ ಠೇವಣಿಯ ಮೇಲೆಯೇ ಪ್ರತಿ ತಿಂಗಳು ಆದಾಯವನ್ನು ನೀಡಲಾಗುತ್ತದೆ. ಖಾತೆಯ ಮೇಲಿನ ಬಡ್ಡಿಯನ್ನು ಪೋಸ್ಟ್ ಆಫೀಸ್ ಉಳಿತಾಯ ಖಾತೆಯಲ್ಲಿ ಪ್ರತಿಯೊಂದು ತಿಂಗಳು ಪಾವತಿಸಲಾಗುತ್ತದೆ. ನೀವು 5 ವರ್ಷಗಳ ಅನಂತರ ನಿಮ್ಮ ಠೇವಣಿ ಮೊತ್ತವನ್ನು ನೀವು ಹಿಂಪಡೆಯಬಹುದು. ನೀವು ಯೋಜನೆಯ ಲಾಭವನ್ನು ಮತ್ತಷ್ಟು ಪಡೆಯಲು ಬಯಸಿದ್ರೆ, ನೀವು ಮುಕ್ತಾಯದ ಅನಂತರ ಹೊಸದಾದ ಖಾತೆಯನ್ನು ತೆರೆಯಬಹುದು.
ಇದನ್ನೂ ಓದಿ: ಈ ಯೋಜನೆಯಡಿ 5% ಬಡ್ಡಿಗೆ 3 ಲಕ್ಷ ಸಾಲ.!! ಈ ಸೌಲಭ್ಯ ಪಡೆಯುವುದು ಹೇಗೆ?
ನೀವು 5,55,000 ಗಳಿಸುವುದು ಹೇಗೆ?
ಪೋಸ್ಟ್ ಆಫೀಸ್ ಮಾಸಿಕವಾಗಿ ಉಳಿತಾಯ ಯೋಜನೆಯಲ್ಲಿ ಶೇ.7.4 ರ ದರದಲ್ಲಿಯೇ ಬಡ್ಡಿಯನ್ನು ನೀಡುತ್ತಿದೆ. ನೀವು ನಿಮ್ಮ ಹೆಂಡತಿಯ ಜೊತೆ 15 ಲಕ್ಷ ರೂಪಾಯಿಗಳನ್ನು ಅದರಲ್ಲಿ ಠೇವಣಿಯನ್ನು ಮಾಡಿದ್ರೆ, ನೀವು ಪ್ರತಿ ತಿಂಗಳು 7.4 ರಷ್ಟು ಬಡ್ಡಿ ದರದಲ್ಲಿ 9,250 ರೂಪಾಯಿಗಳನ್ನು ಗಳಿಸುತ್ತೀರಿ. ಈ ಒಂದು ವರ್ಷದಲ್ಲಿ 1,11,000 ರೂ.ಗಳ ಖಾತರಿಯ ಆದಾಯವು ಇದ್ದೆ ಇದೆ ಎಂದು ತಿಳಿದಿದೆ. 1,11,000 x 5 = 5,55,000 ಈ ರೀತಿಯಲ್ಲಿ ನೀವು ಮತ್ತು ನಿಮ್ಮ ಸಂಗಾತಿ 5 ವರ್ಷಗಳಲ್ಲಿ 5,55,000 ರೂಪಾಯಿಗಳ ಬಡ್ಡಿಯನ್ನು ಗಳಿಸಬಹುದು.
ಖಾತೆಯನ್ನು ಯಾರು ತೆರೆಯಬಹುದು..?
ದೇಶದ ಯಾವುದೇ ರೀತಿಯ ನಾಗರಿಕರು ಪೋಸ್ಟ್ ಆಫೀಸ್ ಮಾಸಿಕ ಆದಾಯ ಯೋಜನೆಯಲ್ಲಿ ಖಾತೆಯನ್ನು ತೆರೆಯಬಹುದು. ಒಂದು ವೇಳೆ ಮಗುವಿನ ಹೆಸರಲ್ಲೂ ಖಾತೆಯನ್ನು ಸಹ ತೆರೆಯಬಹುದು. ಮಗುವಿಗೆ 10 ವರ್ಷಕ್ಕಿಂತ ಕಡಿಮೆಯಿದ್ರೆ, ಅವನ ಪೋಷಕರು ಇಲ್ಲವೇ ಕಾನೂನು ಪಾಲಕರು ಅವನ ಹೆಸರಿನಲ್ಲಿ ಖಾತೆಯನ್ನು ತೆರೆಯಬಹುದು. ಮಗುವಿಗೆ 10 ವರ್ಷ ವಯಸ್ಸಾಗಿದ್ದಾಗ ಈ ಖಾತೆಯನ್ನು ಸ್ವತಃ ನಿರ್ವಹಿಸುವ ಹಕ್ಕನ್ನು ಸಹ ಪಡೆಯಬಹುದು. ಈ ಯೋಜನೆಗೆ ಗುರುತಿನ ಚೀಟಿಗಾಗಿ ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್ ನೀಡುವುದು ಕಡ್ಡಾಯವಾಗಿದೆ.
ಇತರೆ ವಿಷಯಗಳು:
ವಿದ್ಯಾರ್ಥಿಗಳಿಗಾಗಿ ‘ಲೈಫ್ಸ್ ಗುಡ್’ ವಿದ್ಯಾರ್ಥಿವೇತನ! ಪಡೆಯಬಹುದು 50 ಸಾವಿರದಿಂದ 1 ಲಕ್ಷ
ರೇಷನ್ ಕಾರ್ಡ್‌ದಾರರಿಗೆ ಗುಡ್ ನ್ಯೂಸ್.!! ‘ಅನ್ನ ಚಕ್ರ’ ಕ್ಕೆ ಕೇಂದ್ರದಿಂದ ಚಾಲನೆ