ಈ ಯೋಜನೆಯಡಿ 5% ಬಡ್ಡಿಗೆ 3 ಲಕ್ಷ ಸಾಲ.!! ಈ ಸೌಲಭ್ಯ ಪಡೆಯುವುದು ಹೇಗೆ?

ಹಲೋ ಸ್ನೇಹಿತರೆ, ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ವರ್ಗದ ಕುಶಲಕರ್ಮಿಗಳಿಗೆ ಆರ್ಥಿಕ ನೆರವು ನೀಡುವ ಹಾಗೂ ಅವರನ್ನು ಸಬಲೀಕರಣಗೊಳಿಸುವ ಉದ್ದೇಶದಿಂದ ಕೇಂದ್ರ ಸರ್ಕಾರವು ಕಳೆದ ವರ್ಷ ಪಿಎಂ ವಿಶ್ವಕರ್ಮ ಯೋಜನೆಯನ್ನು ಜಾರಿಗೊಳಿಸಿದೆ. ಇದೀಗ ಈ ಯೋಜನೆಯ ಅಡಿಯಲ್ಲಿ ಕುಶಲಕರ್ಮಿಗಳಿಗೆ 5% ಬಡ್ಡಿಗೆ ಸುಮಾರು 3 ಲಕ್ಷದಷ್ಟು ಸಾಲ ಸೌಲಭ್ಯ ದೊರೆಯಲಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.

PM Vishwakarma Scheme kannada

ಕೇಂದ್ರ ಸರ್ಕಾರ ಹಲವಾರು ಜನಪರ ಯೋಜನೆಗಳನ್ನು ಜಾರಿಗೆ ತಂದಿವೆ. ಅವುಗಳಲ್ಲಿ ಪಿಎಂ ವಿಶ್ವಕರ್ಮ ಯೋಜನೆಯೂ ಒಂದು. ದೇಶದ ಸಾಂಪ್ರದಾಯಿಕವಾದ ಕಲೆಗಳಿಗೆ ಉತ್ತೇಜನ ನೀಡುವುದರ ಜೊತೆ ಜೊತೆಗೆ ಕುಶಲಕರ್ಮಿಗಳ ಅಭ್ಯುದಯಕ್ಕೆ ನೆರವು ಕಲ್ಪಿಸುವ ಉದ್ದೇಶದಿಂದ ಕೇಂದ್ರ ಸರ್ಕಾರವು ಕಳೆದ ವರ್ಷ ಅಂದರೆ ಸೆಪ್ಟೆಂಬರ್ 17, 2023 ರಂದು ಪಿಎಂ ವಿಶ್ವಕರ್ಮ ಯೋಜನೆಯನ್ನು ಜಾರಿಗೊಳಿಸಿತು. ಸಾಲದ ಸೌಲಭ್ಯದಿಂದ ಹಿಡಿದು ಆಧುನಿಕವಾದ ತರಬೇತಿ ಹಾಗೂ ಮಾರುಕಟ್ಟೆ ವ್ಯವಸ್ಥೆಯು ಸೇರಿದಂತೆ ಹಲವು ಸೌಲಭ್ಯಗಳನ್ನು ಈ ಸ್ಕೀಮ್‌ನ ಫಲಾನುಭವಿಗಳಿಗೆ ನೀಡಲಾಗುತ್ತಿದೆ.

ಲಕ್ಷಾಂತರ ಕುಶಲಕರ್ಮಿಗಳು ಈ ಯೋಜನೆಯ ಪ್ರಯೋಜನವನ್ನು ಸಹ ಪಡೆಯುತ್ತಿದ್ದಾರೆ. ಇದೀಗ ಪಿಎಂ ವಿಶ್ವಕರ್ಮ ಯೋಜನೆಯಡಿ 1,751 ಕೋಟಿ ರೂ. ಸಾಲವನ್ನು ಬಿಡುಗಡೆಯನ್ನು ಮಾಡಲಾಗಿದ್ದು, ಈ ಯೋಜನೆ ಅಡಿ ಕುಶಲಕರ್ಮಿಗಳಿಗೆ 5% ಬಡ್ಡಿಗೆ ಸುಮಾರು 3 ಲಕ್ಷ ರೂ. ಗಳವರೆಗೆ ಸಾಲದ ಸೌಲಭ್ಯವನ್ನು ಪಡೆಯಬಹುದಾಗಿದೆ.

ಅಕ್ಟೋಬರ್‌ 31 ರ ವೇಳೆಗೆ ಪಿಎಂ ವಿಶ್ವಕರ್ಮ ಯೋಜನೆ ಅಡಿ 1,751 ಕೋಟಿ ರೂ. ಸಾಲವನ್ನು ಮಂಜೂರು ಮಾಡಲಾಗಿದೆ ಎಂದು ಕೇಂದ್ರ ಹಣಕಾಸು ಖಾತೆಯ ರಾಜ್ಯ ಸಚಿವ ಪಂಕಜ್‌ ಚೌಧರಿಯು ಹೇಳಿದ್ದಾರೆ. ರಾಜ್ಯಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಲಿಖಿತವಾಗಿ ಉತ್ತರವನ್ನು ನೀಡಿದ ಅವರು, “ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಜನ ಎದುರಿಸುತ್ತಿರುವ ಸವಾಲುಗಳನ್ನು ನಿವಾರಿಸಲು, ಸಾಲ ಸೌಲಭ್ಯ ವಿತರಣೆಗೆ ಎದುರಾಗಿದ್ದ ತೊಡಕುಗಳ ನಿವಾರಣೆಗೆ ಮತ್ತು ಸುಲಭವಾಗಿ ಸಾಲ ಸಿಗುವಂತೆ ಮಾಡಲು ಸರ್ಕಾರವನ್ನು ವಿವಿಧ ಕ್ರಮಗಳನ್ನು ಕೈಗೊಂಡಿದೆ” ಎಂದು ಹೇಳಿದ್ದಾರೆ.

5% ಬಡ್ಡಿಗೆ 3 ಲಕ್ಷ ರೂ. ಸಾಲ?

ಬಡಿಗ, ದೋಣಿ ತಯಾರಕರು, ಕುಂಬಾರರು, ಕಮ್ಮಾರರು ಮತ್ತು ಅಕ್ಕಸಾಲಿಗರು, ಶಿಲ್ಪಿಗಳು, ಕ್ಷೌರಿಕರು, ರಾಜಮೇಸ್ತ್ರಿಗಳು, ಮೀನಿನ ಬಲೆ ತಯಾರಕರು ಸೇರಿದಂತೆ 18 ಬಗೆಯ ಕುಶಲಕರ್ಮಿಗಳಿಗಾಗಿ PM ವಿಶ್ವಕರ್ಮ ಯೋಜನೆಯನ್ನು ಕಳೆದ ವರ್ಷd ಜಾರಿಗೊಳಿಸಲಾಗಿದೆ. ಈ ಯೋಜನೆಯಡಿಯಲ್ಲಿ ಈ ಎಲ್ಲಾ 18 ವರ್ಗದ ಕುಶಲಕರ್ಮಿಗಳು ಕಡಿಮೆಯಾದ ಬಡ್ಡಿಯ ದರದಲ್ಲಿ ಸಾಲವನ್ನು ಪಡೆಯಬಹುದಾಗಿದೆ.

ಇದನ್ನೂ ಓದಿ: ವಿದ್ಯಾರ್ಥಿಗಳಿಗಾಗಿ ‘ಲೈಫ್ಸ್ ಗುಡ್’ ವಿದ್ಯಾರ್ಥಿವೇತನ! ಪಡೆಯಬಹುದು 50 ಸಾವಿರದಿಂದ 1 ಲಕ್ಷ

ಸ್ವಂತ ಉದ್ಯೋಗ ಅಥವಾ ಉದ್ಯಮವನ್ನು ಸ್ಥಾಪಿಸಲು ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆ ಅಡಿಯಲ್ಲಿ 5% ಬಡ್ಡಿಯಲ್ಲಿ 3 ಲಕ್ಷ ರೂ. ಸಾಲ ಸೌಲಭ್ಯವನ್ನು ಒದಗಿಸಲಾಗಿದೆ. ಈ ಯೋಜನೆಯಡಿ 3 ಲಕ್ಷ ರೂಪಾಯಿ ಸಾಲವನ್ನು ಫಲಾನುಭವಿಗಳಿಗೆ ನೀಡಲಾಗುತ್ತದೆ. ಸಾಲದ ಮೊತ್ತವನ್ನು ಫಲಾನುಭವಿಗೆ 2 ಕಂತುಗಳಲ್ಲಿ ನೀಡಲಾಗುತ್ತದೆ. ಮೊದಲ 1 ಲಕ್ಷ ಹಾಗೂ ಎರಡನೇಯದಾಗಿ 2 ಲಕ್ಷ ರೂ ಸಾಲವನ್ನು ನೀಡಲಾಗುತ್ತದೆ.

ಅರ್ಜಿ ಸಲ್ಲಿಸುವುದು ಹೇಗೆ?

ಪಿಎಂ ವಿಶ್ವಕರ್ಮರ ಯೋಜನೆಗೆ ಅಧಿಕೃತವಾದ ವೆಬ್‌ಸೈಟ್ pmvishwakarma.gov.in ನ ಮೂಲಕವಾಗಿ ಆನ್‌ಲೈನ್‌ನಲ್ಲಿ ಅರ್ಜಿಯನ್ನು ಸಲ್ಲಿಸಬಹುದು. ವೆಬ್‌ಸೈಟ್ ಅನ್ನು ತೆರೆದು ನೀವು ಅನ್ವಯಿಸು ಆನ್‌ಲೈನ್ ಆಯ್ಕೆಯನ್ನು ಕ್ಲಿಕ್ ನ್ನು ಮಾಡಬೇಕು ಹಾಗೂ ಅಗತ್ಯ ಮಾಹಿತಿಯನ್ನು ಭರ್ತಿಯನ್ನು ಮಾಡಿದ ನಂತರ, ನೀವು ನೋಂದಣಿಯನ್ನು ಪೂರ್ಣಗೊಳಿಸಬೇಕಾಗುತ್ತದೆ. ನೋಂದಣಿಗಾಗಿ ಫಲಾನುಭವಿಯು ಕಡ್ಡಾಯವಾಗಿ ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್ ಮತ್ತು ಆದಾಯ ಪ್ರಮಾಣಪತ್ರ, ಗುರುತಿನ ಚೀಟಿ, ಬ್ಯಾಂಕ್ ಪಾಸ್ಬುಕ್ ವಿವರ ಹಾಗೂ ವಾಸಸ್ಥಳದ ದೃಢೀಕರಣ ಪತ್ರವನ್ನು ಹೊಂದಿರಬೇಕು.

ಅರ್ಹತೆ ಏನು?

  • ಭಾರತ ಪ್ರಜೆಯಾಗಿರಬೇಕು.
  • ವಯಸ್ಸು 18 ವರ್ಷದಿಂದ 50 ವರ್ಷಗಳ ನಡುವೆ ಇರಬೇಕು.
  • ಯೋಜನೆಯಲ್ಲಿ ಒಳಗೊಂಡಿರುವ 18 ವರ್ಗದ ಯಾವುದಾದರೂ ಒಂದು ಉದ್ಯಮದಲ್ಲಿ ತೊಡಗಿಸಿಕೊಂಡಿರಬೇಕು.

ಇತರೆ ವಿಷಯಗಳು:

ರೈಲ್ವೆ ಇಲಾಖೆಯಿಂದ ನೇರ ನೇಮಕಾತಿ.! 1785 ಕ್ಕೂ ಹೆಚ್ಚು ಖಾಲಿ ಹುದ್ದೆಗಳು

ರೇಷನ್‌ ಕಾರ್ಡ್‌ದಾರರಿಗೆ ಗುಡ್ ನ್ಯೂಸ್.!! ‘ಅನ್ನ ಚಕ್ರ’ ಕ್ಕೆ ಕೇಂದ್ರದಿಂದ ಚಾಲನೆ

Leave a Comment

rtgh