`ಭೂ ಪರಿವರ್ತನೆ’ಗೆ ಈ ದಾಖಲೆಗಳು ಕಡ್ಡಾಯ.!! ತಪ್ಪದೇ ಓದಿ

ಹಲೋ ಸ್ನೇಹಿತರೇ, ರಾಜ್ಯದಲ್ಲಿ ಭೂ ಪರಿವರ್ತನೆ ಮಾಡುವ ಸಂದರ್ಭದಲ್ಲಿ ತಹಶೀಲ್ದಾರರು, ಕಂದಾಯ ನಿರೀಕ್ಷಕರು ಯಾವೆಲ್ಲ ಅಂಶ ಪರಿಗಣನೆ ಮಾಡಬೇಕು ಎನ್ನುವಂತ ಸಂಪೂರ್ಣ ಮಾಹಿತಿ ಮುಂದಿದೆ ಓದಿ.

land conversion status check

ಆಗ ತಹಶೀಲ್ದಾಳರು ಮತ್ತು ಕಂದಾಯ ನಿರೀಕ್ಷಕರು ಕೆಲ ಅಂಶಗಳನ್ನು ಪರಿಗಣಿಸಿ ಅದಕ್ಕೆ ಅನುಮತಿಯನ್ನು ನೀಡಲಾಗುತ್ತದೆ. ಅವು ಯಾವುವು ಅಂತ ಈ ಕೆಳಗಿವೆ.

1. ಸರ್ಕಾರದ ಸುತ್ತೋಲೆಯ ದಿನಾಂಕ:7-6-1999ಕ್ಕೆ ಲಗತ್ತಿಸಿದಂತಹ ಅನುಬಂಧ-1ರಲ್ಲಿ ಅರ್ಜಿಗಳನ್ನು ತಹಶೀಲದಾರರು ದ್ವಿಪ್ರತಿಗಳಲ್ಲಿ ಸ್ವೀಕರಿಸುವುದು.

2. ತಹಶೀಲದಾರರು ಮಂಜೂರಾತಿಯ ಪ್ರಾಧಿಕಾರಿಗೆ ಕೂಡಲೇ ಅರ್ಜಿಯ ಒಂದು ಪ್ರತಿಯನ್ನು ಕಳುಹಿಸುವುದು.

3. ಹೆಚ್ಚಿನ ಮಾಹಿತಿಯ ಅವಶ್ಯವಿದ್ದಲ್ಲಿ ಸಲ್ಲಿಸಲು ಅರ್ಜಿಯನ್ನು ಸ್ವೀಕರಿಸಿದ ಒಂದು ವಾರದೊಳಗಾಗಿ ಅರ್ಜಿದಾರರಿಗೆ ತಿಳಿಸುವುದು.

4. ಜಮೀನಿನ ಒಡೆತನದ ಹೊಂದಿದ ವ್ಯಕ್ತಿಯು ಮಾತ್ರ ಅರ್ಜಿಯನ್ನು ಸಲ್ಲಿಸಿರುವ ಬಗ್ಗೆ ಪರಿಶೀಲಿಸುವುದು.

5. ಭೂಪರಿವರ್ತನೆಯ ಕೋರಿದ ಜಮೀನಿಗೆ ಸಂಬಂಧಪಟ್ಟ RTC/ಮುಟೇಷನ್‌ಗಳು

ಇದನ್ನು ಓದಿ: ನೌಕರರ ವೇತನ ಹೆಚ್ಚಳ! ಶಾಲಾ ಶಿಕ್ಷಕರಿಗೆ ಬಿಗ್ ಶಾಕ್

6. ಭೂಪರಿವರ್ತನೆಯಿಂದ ಈ ಕೆಳಕಾಣಿಸಿದ ಕಾಯ್ದೆ/ನಿಯಮಗಳು ಉಲ್ಲಂಘ ಆಗುತ್ತಿದೆಯೋ ಹೇಗೆ ಅನ್ನುವುದನ್ನು ಪರಿಶೀಲಿಸಿ ಆ ಬಗ್ಗೆ ವಿವರ ನೀಡುವುದು ಕರ್ನಾಟಕದ ಭೂಸುಧಾರಣಾ ಕಾಯ್ದೆ 1961ರ ಕಲಂ 48-A, 77, 77-A, 79-A, 79-B(ಬಿ) ಕರ್ನಾಟಕ ಭೂ ಮಂಜೂರಾತಿಯ ನಿಯಮಗಳು 1969ರ ನಿಯಮ- (ಸಿ) ಕರ್ನಾಟಕ ಪಿ.ಟಿ.ಸಿ.ಎಲ್.ಕಾಯ್ದೆಯು 1978ರ ಕಲಂ 4(1) ಮತ್ತು 4(2) (ಡಿ) ಕರ್ನಾಟಕ ಭೂಕಂದಾಯ ನಿಯಮಗಳು 1966ರ ನಿಯಮ-102-B (ಹಸಿರು ವಲಯಕ್ಕೆ ಸಂಬಂಧಿಸಿದಂತೆ)

7. ಪ್ರಸ್ತಾಪಿತ ಜಮೀನಿನ ಹಕ್ಕಿಗೆ ಸಂಬಂಧಿಸಿದಂತಹ ವ್ಯಾಜ್ಯಗಳೇನಾದರೂ ಇದ್ದಲ್ಲಿ ಅವುಗಳ ಬಗ್ಗೆ ವಿವರಣೆ ನೀಡುವುದು.

8. ಪರಿವರ್ತನೆಯ ಕೋರಿದ ಕ್ಷೇತ್ರದಲ್ಲಿನ ನಕ್ಷೆ.

9. ಸ್ಥಳೀಯ ಯೋಜನಾ ಪ್ರಾಧಿಕಾರಿಗಳಿಂದ ನಿರಪೇಕ್ಷಣಾ ಪ್ರಮಾಣಪತ್ರ

10. ಎಲ್ಲ ವಿವರಗಳು ಮತ್ತು ದಾಖಲೆಗಳೊಂದಿಗೆ ತಹಶೀಲದಾರರು ತಮ್ಮದೆ ವರದಿಯನ್ನು ಅರ್ಜಿಯನ್ನು ಸ್ವೀಕೃತವಾದ ದಿನದಿಂದ 15 ದಿನಗಳ ಒಳಗಾಗಿ ಜಿಲ್ಲಾಧಿಕಾರಿಗಳಿಗೆ ಸಲ್ಲಿಸುವುದು.

11. ಭೂ ಪರಿವರ್ತನೆಯ ಮಂಜೂರಾತಿ ಹಾಗೂ ತಿರಸ್ಕರಿಸಿದ ಪ್ರಕ್ರಿಯೆಯು, 45 ದಿನಗಳೊಳಗಾಗಿ ಪೂರ್ತಿಗೊಳ್ಳಬೇಕು ಅಂತಾ ಮೇಲ್ಕಾಣಿಸಿದ ಸುತ್ತೋಲೆಯಲ್ಲಿ ಸರ್ಕಾರವು ನೀಡಿದಂತಹ ನಿರ್ದೆಶನಗಳನ್ನು ಗಮನದಲ್ಲಿಟ್ಟುಕೊಂಡು ಕಾರ್ಯನಿರ್ವಹಿಸುವುದು.

ಇತರೆ ವಿಷಯಗಳು:

ಇಂದು ‘ಬಿಮಾ ಸಖಿ’ ಯೋಜನೆಗೆ ಪ್ರಧಾನಿ ಚಾಲನೆ! 1 ಲಕ್ಷ ಮಹಿಳೆಯರಿಗೆ ಉದ್ಯೋಗ

ಟೊಮೆಟೊ, ಕೊತ್ತಂಬರಿ ಆಯ್ತು.!! ಈಗ ಈರುಳ್ಳಿ, ಬೆಳ್ಳುಳ್ಳಿ ಬೆಲೆನೂ ಗಗನಕ್ಕೆ

Leave a Comment

rtgh