ಹೊಸ ವರ್ಷಕ್ಕೆ ಮೋದಿ ಗೇಮ್‌ ಚೇಂಜಿಗ್ ಯೋಜನೆಗಳು! ಇಂದೇ ಅರ್ಜಿ ಸಲ್ಲಿಸಿ

ಹಲೋ ಸ್ನೇಹಿತರೆ, 2024 ಮುಕ್ತಾಯಗೊಳ್ಳಲು ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿದ್ದು, ಹೊಸ ವರ್ಷಕ್ಕೆ ತಯಾರಿ ವಿಶ್ವದೆಲ್ಲೆಡೆ ಭರದಿಂದ ನಡೆಯುತ್ತಿದೆ. ಇನ್ನು ಭಾರತದ ಮಟ್ಟಿಗೆ ಹೇಳುವುದಾದರೆ ಪ್ರಸಕ್ತ ವರ್ಷದಲ್ಲಿ ಅನೇಕ ಯೋಜನೆಗಳನ್ನು ಕೇಂದ್ರ ಸರ್ಕಾರ ಹೊರತಂದಿತ್ತು. ಎಲ್ಲರಿಗೂ ತಿಳಿದಿರುವಂತೆ ಈಗಾಗಲೇ ಭಾರತದ ಸಾಮಾನ್ಯ ನಾಗರಿಕರಿಗೆ ಉಳಿತಾಯ ಮತ್ತು ಹೂಡಿಕೆಗಳನ್ನು ಸುಲಭಗೊಳಿಸಲು ಹಣಕಾಸು ಸಚಿವಾಲಯವು ಅನೇಕ ಯೋಜನೆಗಳನ್ನು ಪ್ರಕಟಿಸಿದೆ.

PM Modi Schemes

1. ಕಿಸಾನ್ ಕ್ರೆಡಿಟ್ ಕಾರ್ಡ್ (ಕೆಸಿಸಿ)

ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆಯು ಕೃಷಿ ಮತ್ತು ಅದಕ್ಕೆ ಸಂಬಂಧಿತ ಚಟುವಟಿಕೆಗಳಿಗೆ ಸಾಕಷ್ಟು ಮತ್ತು ಸಕಾಲಿಕವಾಗಿ ಹಣಕಾಸು ಪಡೆಯಲು ರೈತರಿಗೆ ಸಹಾಯ ಮಾಡುತ್ತದೆ. ಈ ಯೋಜನೆಯು ದೀರ್ಘಾವಧಿಯ ಅಭಿವೃದ್ಧಿ ಮತ್ತು ಆರ್ಥಿಕ ಬೆಳವಣಿಗೆಯನ್ನು ಉತ್ತೇಜಿಸುತ್ತದೆ. 2022 ರ ನವೆಂಬರ್ 15ರಂದು ದೇಶಾದ್ಯಂತ ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆಯನ್ನು ಆರಂಭಿಸಲಾಗಿತ್ತು. ಸದ್ಯ ಕಿಸಾನ್‌ ಕ್ರೆಡಿಟ್ ಕಾರ್ಡ್ ಈವರೆಗೆ ಒಟ್ಟು 7.72 ಕೋಟಿ ಖಾತೆಗಳನ್ನು ತೆರೆದಿದ್ದು, 9.99 ಲಕ್ಷ ಕೋಟಿ ರೂ. ಮೌಲ್ಯವನ್ನು ಹೊಂದಿದೆ.

2. ಸ್ಟ್ಯಾಂಡ್ ಅಪ್ ಇಂಡಿಯಾ ಯೋಜನೆ

ಸ್ಟ್ಯಾಂಡ್ ಅಪ್ ಇಂಡಿಯಾ ಯೋಜನೆಯು SC, ST ಮತ್ತು ಮಹಿಳಾ ಉದ್ಯಮಿಗಳಿಗೆ ಸಾಲ ನೀಡುವ ಮೂಲಕ ಉದ್ಯಮಶೀಲತೆಯನ್ನು ಉತ್ತೇಜಿಸುವ ಯೋಜನೆಯಾಗಿದೆ. ಹೊಸದಾಗಿ ಉದ್ಯಮವನ್ನು ಆರಂಭಿಸುವ ನಿಟ್ಟಿನಲ್ಲಿ ಸುಮಾರು 10 ಲಕ್ಷ ರೂ.ನಿಂದ 1 ಕೋಟಿ ರೂ. ವರೆಗೆ ನೆರವನ್ನು ಒದಗಿಸುತ್ತದೆ.

3.ಪ್ರಧಾನ ಮಂತ್ರಿ ಮುದ್ರಾ ಯೋಜನೆ (PMMY)

ಪ್ರಧಾನ ಮಂತ್ರಿ ಮುದ್ರಾ ಯೋಜನೆಯಡಿಯಲ್ಲಿ 2024ರ ನವೆಂಬರ್‌ 1ರ ಪ್ರಕಾರ ಸುಮಾರು 50 ಕೋಟಿಗೂ ಅಧಿಕ ಖಾತೆಗಳಿಗೆ ಸುಮಾರು 31.28 ಲಕ್ಷ ಕೋಟಿ ರೂ. ಮೊತ್ತವನ್ನು ನೀಡಲಾಗಿದೆ. ಈ ಯೋಜನೆಯು ಆರ್ಥಿಕ ನೆರವು ನೀಡುವ ಮೂಲಕ ಮಹತ್ವಾಕಾಂಕ್ಷಿ ಉದ್ಯಮಿಗಳಿಗೆ ಸಹಾಯ ಮಾಡುವ ಗುರಿಯನ್ನು ಹೊಂದಿದೆ. 30.55 ಲಕ್ಷ ಕೋಟಿ ರೂ. ಮೊತ್ತವನ್ನು ಈ ಯೋಜನೆಯಡಿ ವಿತರಿಸಲಾಗಿದೆ.

ಇದನ್ನು ಓದಿ: ಉದ್ಯೋಗಿಗಳಿಗೆ ಸಿಹಿ ಸುದ್ದಿ.!! ವಿವರಗಳನ್ನು ಅಪ್ಲೋಡ್‌ಗೆ ಗಡುವು ವಿಸ್ತರಣೆ

4.ಅಟಲ್ ಪಿಂಚಣಿ ಯೋಜನೆ (APY)

7 ಕೋಟಿಗೂ ಹೆಚ್ಚು ಸದಸ್ಯರನ್ನು ಹೊಂದಿರುವ ಅಟಲ್ ಪಿಂಚಣಿ ಯೋಜನೆಯು ತನ್ನ ಚಂದಾದಾರರಿಗೆ ಸುರಕ್ಷಿತ ಮತ್ತು ಖಾತರಿಯ ಪಿಂಚಣಿಯನ್ನು ಒದಗಿಸುವ ಯೋಜನೆಯಾಗಿದೆ. ಯೋಜನೆಯು 60 ವರ್ಷದ ನಂತರ ತಿಂಗಳಿಗೆ ಕನಿಷ್ಠ ಖಾತರಿ ಪಿಂಚಣಿ ರೂ. 1000 ರೂ.ನಿಂದ ಹಿಡಿದು 5000 ರೂ. ವರೆಗೆ ಪಿಂಚಣಿಯನ್ನು ಒದಗಿಸುತ್ತದೆ.

5. ಪ್ರಧಾನ ಮಂತ್ರಿ ಜೀವನ್ ಜ್ಯೋತಿ ಬಿಮಾ ಯೋಜನೆ (PMJJBY)

21 ಕೋಟಿ ಫಲಾನುಭವಿಗಳಿಗೆ 2 ಲಕ್ಷ ರೂ. ಜೀವ ವಿಮಾ ರಕ್ಷಣೆಯನ್ನು ಒದಗಿಸುತ್ತದೆ. 2024 ರ ಎ. 20ರ ಪ್ರಕಾರ ಯೋಜನೆಯು ಒಟ್ಟು 21.67 ಕೋಟಿ ದಾಖಲಾತಿಗಳನ್ನು ಹೊಂದಿದ್ದು, 860,575 ಕ್ಲೈಮ್‌ಗಳಿಗೆ ಸುಮಾರು 17,211.50 ಕೋಟಿ ರೂ. ಮೊತ್ತವನ್ನು ವಿತರಿಸಲಾಗಿದೆ.

6. ಪ್ರಧಾನ ಮಂತ್ರಿ ಜನ್ ಧನ್ ಯೋಜನೆ (PMJDY)

ಪ್ರಧಾನ ಮಂತ್ರಿ ಜನ್ ಧನ್ ಯೋಜನೆಯು ದೇಶದ ಬ್ಯಾಂಕ್ ಖಾತೆಯನ್ನು ಹೊಂದಿಲ್ಲದ ಜನರಿಗೆ ಖಾತೆಗೆ ಸೇರಿಸುವುದೇ ಆಗಿದೆ. ಈ ಮೂಲಕ ಜನರನ್ನು ಆರ್ಥಿಕ ಚಟುವಟಿಕೆಗಳಿಗೆ ಸೇರ್ಪಡೆಗೊಳಿಸುವ ಉದ್ದೇಶವನ್ನು ಹೊಂದಿದೆ. 20ನೇ ನವೆಂಬರ್ 2024ರ ಪ್ರಕಾರ ಈ ಯೋಜನೆಯಡಿಯಲ್ಲಿ ಸುಮಾರು 54.03 ಲಕ್ಷ ಖಾತೆಗಳನ್ನು ಆರಂಭಿಸಲಾಗಿದ್ದು, ಸುಮಾರು 2,37,575 ಕೋಟಿ. ರೂ. ಮೊತ್ತವನ್ನು ಜಮೆ ಮಾಡಲಾಗಿದೆ. ಇದರಲ್ಲಿ ಮಹಿಳೆಯರು 55.7 ಪ್ರತಿಶತ ಖಾತೆಗಳನ್ನು ಹೊಂದಿದ್ದಾರೆ. ಅದರಲ್ಲೂ ಗ್ರಾಮೀಣ ಅಥವಾ ಅರೆ-ನಗರ ಪ್ರದೇಶಗಳಲ್ಲಿ 66.6 ಪ್ರತಿಶತ ಖಾತೆಗಳನ್ನು ಹೊಂದಿದೆ. ಇಲ್ಲಿಯವರೆಗೆ 36.92 ಕೋಟಿ ರುಪೇ ಕಾರ್ಡ್‌ಗಳನ್ನು ವಿತರಿಸಲಾಗಿದೆ.

7. ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆ (PMSBY)

ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆಯಲ್ಲಿ ಸುಮಾರು 48 ಕೋಟಿ ಜನರು ಸೇರಿದ್ದಾರೆ. ಇದು ಅಪಘಾತ ಸಂದರ್ಭದಲ್ಲಿ 2 ಲಕ್ಷ ರೂ. ಮೊತ್ತವನ್ನು ವಿಮಾ ರಕ್ಷಣೆಯಲ್ಲಿ ನೀಡುತ್ತದೆ.

8. ಎನ್ಪಿಎಸ್ ವಾತ್ಸಲ್ಯ

NPS ವಾತ್ಸಲ್ಯವು ಮಕ್ಕಳ ಭವಿಷ್ಯದ ದೃಷ್ಟಿಯಿಂದ ಸ್ಥಿರವಾದ ಆರ್ಥಿಕ ಅಡಿಪಾಯವನ್ನು ಒದಗಿಸುವ ಮೂಲಕ ಅವರಿಗೆ ಶಕ್ತಿ ತುಂಬುತ್ತದೆ. ಯೋಜನೆಯ ಪ್ರಕಾರ ಒಂದು ಮಗುವು 18 ತುಂಬುವ ವರೆಗೆ ಪೋಷಕರು ಅಥವಾ ನೋಡಿಕೊಳ್ಳುವವರು ಖಾತೆಗೆ ಹಣ ಜಮೆ ಮಾಡಬಹುದು.

ಇತರೆ ವಿಷಯಗಳು:

ರೋಗಿಗಳಿಗೆ ಬಂಪರ್ ಗುಡ್ ನ್ಯೂಸ್.!! ಮುಂದಿನ ವರ್ಷದಿಂದ ಈ ಲಸಿಕೆ ಉಚಿತ

ಮಹಿಳೆಯರಿಗೆ ಗುಡ್‌ ನ್ಯೂಸ್.!! ಫ್ರೀ `ಸೋಲಾರ್ ಸ್ಟವ್’ ಗೆ ಈ ದಾಖಲೆ ಕಡ್ಡಾಯ

Leave a Comment

rtgh