ಆರೋಗ್ಯ ಇಲಾಖೆಯಲ್ಲಿದೆ 9,871ಕ್ಕೂ ಹೆಚ್ಚು ಹುದ್ದೆ.!! ರಾಜ್ಯ ಸರ್ಕಾರದಿಂದ ಗ್ರೀನ್ ಸಿಗ್ನಲ್

ಹಲೋ ಸ್ನೇಹಿತರೇ, ರಾಜ್ಯದ ಉದ್ಯೋಗಾಕಾಂಕ್ಷಿಗಳಿಗೆ ಸಿಹಿಸುದ್ದಿಯನ್ನು ಸರ್ಕಾರ ನೀಡಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಖಾಲಿ ಇರುವಂತ ಬರೋಬ್ಬರಿ 9,871 ಹುದ್ದೆಗಳ ಭರ್ತಿಗೆ ರಾಜ್ಯ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದೆ.

health department karnataka recruitment

ಈ ಕುರಿತಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸರ್ಕಾದ ಅಧೀನ ಕಾರ್ಯದರ್ಶಿ ನಡವಳಿಯನ್ನು ಹೊರಡಿಸಿದ್ದು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳು ರವರ ಪ್ರಸ್ತಾವನೆಯಲ್ಲಿ ಈ ಕೆಳಕಂಡ ವಿವಿಧ ವೃಂದಗಳ ಅರೆ ವೈದ್ಯಕೀಯ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಆಡಳಿತಾತ್ಮಕ ಅನುಮತಿ ನೀಡುವಂತೆ ಹಾಗೂ ನರ ನೇಮಕಾತಿ ಮೂಲಕ ಅನುಮತಿ ನೀಡಿ ಭರ್ತಿ ಮಾಡುವವರೆಗೆ ಅಥವಾ ಒಂದು ವರ್ಷದ ಅವಧಿಗೆ ಸದರಿ ಖಾಲಿ ಹುದ್ದೆಗಳನ್ನು ಗುತ್ತಿಗೆ| ಹೊರಗುತ್ತಿಗೆ ಆಧಾರದ ಮೇಲೆ ಭರ್ತಿ ಮಾಡಲು ಅನುಮತಿ ನೀಡುವಂತೆ ಕೋರಿರುತ್ತಾರೆ ಎಂದಿದ್ದಾರೆ.

ಉಳಿಕೆ ಮೂಲ ವೃಂದದ ಹುದ್ದೆಗಳ ವಿವರ

ಗ್ರೂಪ್-ಬಿ

  1. ಕ್ಲಿನಿಕಲ್ ಇನ್ ಸ್ಟ್ರಕ್ಟರ್ – 01
  2. ಸಹಾಯಕ ಕೀಟಶಾಸ್ತ್ರಜ್ಞರು – 07
  3. ಮೈಕ್ರೋಬಯಾಲಜಿಸ್ಟ್ – 12
  4. ಕ್ಲಿನಿಕಲ್ ಸೈಕಾಲಜಿಸ್ಟ್ – 06
  5. ಮನೋ ಸಾಮಾಜಿಕ ತಜ್ಞರು ( ಸೈಕಿಯಾಟ್ರಿಕ್ ಸೋಷಿಯಲ್ ವರ್ಕರ್ ) – 07
  6. ಕಿರಿಯ ರಾಸಾಯನ ಶಾಸ್ತ್ರಜ್ಞರು – 15

ಗ್ರೂಪ್-ಸಿ

  1. ಫಾರ್ಮಸಿಸ್ಟ್ ಅಧಿಕಾರಿ – 640
  2. ಶುಶ್ರೂಷಾಧಿಕಾರಿ – 1694
  3. ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ( ಕಿ.ಆ.ಸ – ಮಹಿಳಾ) – 3317
  4. ಆರೋಗ್ಯ ನಿರೀಕ್ಷಣಾಧಿಕಾರಿ ( ಕಿ.ಆ.ಸ) – 2628
  5. ಕಿರಿಯ ವೈದ್ಯಕೀಯ ಪ್ರಯೋಗ ಶಾಲಾ ತಾಂತ್ರಿಕ ಅಧಿಕಾರಿ – 356
  6. ಹಿರಿಯ ವೈದ್ಯಕೀಯ ಪ್ರಯೋಗ ಶಾಲಾ ತಾಂತ್ರಿಕ ಅಧಿಕಾರಿ -34
  7. ಕಿರಿಯ ವೈದ್ಯಕೀಯ ವಿಕಿರಣ ಶಾಸ್ತ್ರ ಚಿತ್ರಣ ಅಧಿಕಾರಿ – 59
  8. ಹಿರಿಯ ವೈದ್ಯಕೀಯ ವಿಕಿರಣ ಶಾಸ್ತ್ರ ಚಿತ್ರಣ ಅಧಿಕಾರಿ -10
  9. ನೇತ್ರಾಧಿಕಾರಿ – 125
  10. ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿಗಳು – 83
  11. ಒಟ್ಟು ಹುದ್ದೆಗಳು 8994.

ಇದನ್ನು ಓದಿ: ರಾಜ್ಯದ ಜನತೆಗೆ ಮತ್ತೊಂದು ಶಾಕ್.!! ‘ಕಾವೇರಿ’ ನೀರಿನ ದರ ಏರಿಕೆ

ಕಲ್ಯಾಣ ಕರ್ನಾಟಕ ವೃಂದದ ಹುದ್ದೆಗಳ ವಿವರ

ಗ್ರೂಪ್-ಬಿ

  • ಸಹಾಯಕ ಕೀಟಶಾಸ್ತ್ರಜ್ಞರು – 02
  • ಮೈಕ್ರೋಬಯಾಲಜಿಸ್ಟ್ – 0
  • ಕ್ಲಿನಿಕಲ್ ಸೈಕಾಲಜಿಸ್ಟ್ – 02
  • ಮನೋ ಸಾಮಾಜಿಕವಾದ ತಜ್ಞರು- 0
  • ಕಿರಿಯ ರಾಸಾಯನ ಶಾಸ್ತ್ರಜ್ಞರು – 03

ಗ್ರೂಪ್-ಸಿ

  • ಫಾರ್ಮಸಿ ಅಧಿಕಾರಿ – 65
  • ಶುಶ್ರೂಷಾಧಿಕಾರಿ – 351
  • ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ( ಕಿ.ಆ.ಸ – ಮಹಿಳೆ) – 133
  • ಆರೋಗ್ಯ ನಿರೀಕ್ಷಣಾಧಿಕಾರಿ (ಕಿ.ಆ.ಸ) – 221
  • ಕಿರಿಯ ವೈದ್ಯಕೀಯ ಪ್ರಯೋಗ ಶಾಲಾ ತಾಂತ್ರಿಕ ಅಧಿಕಾರಿ – 57
  • ಹಿರಿಯ ವೈದ್ಯಕೀಯ ಪ್ರಯೋಗ ಶಾಲಾ ತಾಂತ್ರಿಕ ಅಧಿಕಾರಿ – 02
  • ಕಿರಿಯ ವೈದ್ಯಕೀಯ ವಿಕಿರಣ ಶಾಸ್ತ್ರ ಚಿತ್ರಣ ಅಧಿಕಾರಿ – 30
  • ನೇತ್ರಾಧಿಕಾರಿ – 05
  • ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ -06
  • ಒಟ್ಟು ಹುದ್ದೆ 877.

ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಮಂಜೂರಾಗಿ ಖಾಲಿಯಿರುವ 1205 ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ (ANMS) ಮತ್ತು 300 ಆರೋಗ್ಯ ನಿರೀಕ್ಷಣಾಧಿಕಾರಿ (HIOS) ಹುದ್ದೆಗಳನ್ನು ಈ ಕೆಳಕಂಡ ಷರತ್ತುಗಳಿಗೊಳಪಟ್ಟು ನೇರ ನೇಮಕಾತಿ ಮುಖಾಂತ ಭರ್ತಿ ಮಾಡಿಕೊಳ್ಳಲು ಸರ್ಕಾರವು ಅನುಮತಿ ನೀಡಿ ಆದೇಶಿಸಿದ್ದಾರೆ.

ಮುಂದುವರೆದು, ಆಯುಕ್ತರು, ಆಕುಕ ಸೇವೆಗಳು ರವರು ನೇಮಕಾತಿ ಪ್ರಕ್ರಿಯೆಯನ್ನು ನಿಗಧಿತ ಕಾಲಮಿತಿಯೊಳಗೆ ಪೂರ್ಣಗೊಳಿಸಲು ಅಗತ್ಯವಿರುವ ಎಲ್ಲಾ ಕ್ರಮಗಳನ್ನು ಕೈಗೊಳ್ಳತಕ್ಕದ್ದು ಮತ್ತು ಕೆಳಕಂಡಂತ ವಿಧಿಸಿರುವ ಷರತ್ತುಗಳ ಅನುಪಾಲನಾ ವರದಿಯನ್ನು ಸಲ್ಲಿಸತಕ್ಕದ್ದು ಎಂದು ತಿಳಿಸಿದ್ದಾರೆ.

ಇತರೆ ವಿಷಯಗಳು:

ರಾಜ್ಯದ `SC-ST’ ಯವರಿಗೆ ಗುಡ್ ನ್ಯೂಸ್.!! ವಕೀಲರ ನೇಮಕಾತಿಯಲ್ಲಿ ಶೇ. 24ರಷ್ಟು ಮೀಸಲಾತಿ ಜಾರಿ

ಕೆಎಸ್​ಆರ್​ಟಿಸಿ, ಬಿಎಂಟಿಸಿ ಬೃಹತ್ ಮುಷ್ಕರ.!! ಈ ಬೇಡಿಕೆ ಈಡೇರಿಸುವಂತೆ ಎಚ್ಚರಿಕೆ

Leave a Comment

rtgh