ಹಲೋ ಸ್ನೇಹಿತರೇ, ಅನ್ನಭಾಗ್ಯ ಯೋಜನೆಯಡಿಯಲ್ಲಿ ಸರಕಾರದ ಸೌಲಭ್ಯಗಳನ್ನು ಪಡೆಯುತ್ತಿದ್ದವರ ಬಿಪಿಎಲ್ ಕಾರ್ಡುಗಳನ್ನು ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ರದ್ದು ಮಾಡಿದೆ. ರಾಜ್ಯ ಸರ್ಕಾರದ ಸೂಚನೆಯ ಮೇರೆಗೆ BPL ಕಾರ್ಡುಗಳ ಪರಿಶೀಲನೆ ನಡೆಸಿದ್ದು, ಆದಾಯ ತೆರಿಗೆ ಪಾವತಿಯು ಸೇರಿದಂತೆ ಹಲವು ಕಾರಣಗಳನ್ನು ನೀಡಿದ ಲಕ್ಷಾಂತರ BPL ಕಾರ್ಡುಗಳನ್ನು ರದ್ದು ಪಡಿಸಿ APL ಕಾರ್ಡ್ ವಿತರಿಸಲಾಗಿದೆ.

ಕರ್ನಾಟಕದಲ್ಲಿ ಅನರ್ಹ BPL ಕಾರ್ಡ್ಗಳನ್ನು ವಾಪಾಸ್ ಪಡೆಯುವುದು ರಾಜ್ಯ ಸರ್ಕಾರದ ಉದ್ದೇಶವಾಗಿದ್ದು, ಅರ್ಹರ BPL ಕಾರ್ಡ್ಗಳನ್ನು ಯಾವುದೇ ಕಾರಣಕ್ಕೂ ರದ್ದು ಮಾಡಬಾರದು ಎಂದು ಕರ್ನಾಟಕ ಆಹಾರ ಹಾಗೂ ನಾಗರೀಕ ಸರಬರಾಜು ಇಲಾಖೆ ರಾಜ್ಯ ಸರಕಾರ ಕಟ್ಟುನಿಟ್ಟಿನ ಆದೇಶ ನೀಡಿದೆ. ಒಂದೊಮ್ಮೆ ಪಡಿತರ ಚೀಟಿಯನ್ನು ಪರಿಷ್ಕರಣೆಯ ವೇಳೆಯಲ್ಲಿ ಬಡವರಿಗೆ ಅನ್ಯಾಯವಾಗಿದ್ದರೆ ಅಂತಹವರು ಮತ್ತೊಮ್ಮೆ BPL Card ಪಡೆಯಲು ಅವಕಾಶವನ್ನು ಕಲ್ಪಿಸಿದೆ.
ಸದ್ಯ ರಾಜ್ಯದ ಕಾಂಗ್ರೆಸ್ ಸರ್ಕಾರದ ನಿರ್ದೇಶನದ ಮೇರೆಗೆ ಆಹಾರ ಇಲಾಖೆ BPL ಕಾರ್ಡುದಾರರಿಗೆ ಬಿಗ್ ಆಪರೇಷನ್ ನಡೆಸುತ್ತಿದೆ. ರಾಜ್ಯದಲ್ಲಿ ಈಗಾಗಲೇ ಲಕ್ಷಾಂತರ ಕಾರ್ಡ್ ರದ್ದಾಗಿದೆ.
ಇದನ್ನು ಓದಿ: ರಾಜ್ಯದಲ್ಲಿ 22 ಲಕ್ಷ ರೇಷನ್ ಕಾರ್ಡ್ ರದ್ದು ನಿಮ್ಮ ಹೆಸರು ಇದೆಯಾ ನೋಡಿ !
ಈ ಮೂಲಕ ರಾಜ್ಯ ಸರಕಾರ ಬಡವರಿಗೆ ಅನ್ಯಾಯ ಮಾಡಿದೆ ಎಂಬ ಆರೋಪ ಕೇಳಿಬಂದಿದೆ. ಇದ್ರ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯರವರು ಇಲಾಖೆಯ ಅಧಿಕಾರಿಗಳಿಗೆ ಖಡಕ್ ಆದ ಸೂಚನೆಯನ್ನು ನೀಡಿದ್ದಾರೆ.
ಅರ್ಹರಾಗಿದ್ದು BPL Card ಕಳೆದುಕೊಂಡಿರುವ ಫಲಾನುಭವಿಗಳು ಇದ್ರೆ ಅಂತಹವರು ಯಾವುದೇ ಕಾರಣಕ್ಕೂ ಭಯವನ್ನು ಪಡುವ ಅಗತ್ಯವಿಲ್ಲ ಎಂದು ಶಿವಮೊಗ್ಗ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷ ಸಿಎಸ್ ಚಂದ್ರ ಭೂಪಾಲರವರು ತಿಳಿಸಿದ್ದಾರೆ. ರಾಜ್ಯ ಸರ್ಕಾರದ ಸೂಚನೆಯ ಮೇರೆಗೆ ಅನರ್ಹ ಕಾರ್ಡುದಾರರ ಪತ್ತೆಗೆ ಕ್ರಮಕೈಗೊಂಡಿದೆ. ಆದ್ರೆ ಅರ್ಹ BPL ಕಾರ್ಡುದಾರರಿಗೆ ಯಾವುದೇ ಸಮಸ್ಯೆಯು ಆಗೋದಿಲ್ಲ ಎಂದಿದ್ದಾರೆ.
ಇತರೆ ವಿಷಯಗಳು:
ಸಿಎಂನಿಂದ ಬಂತು ಖಡಕ್ ವಾರ್ನಿಂಗ್!! 20 ಲಕ್ಷಕ್ಕೂ ಅಧಿಕ ರೇಷನ್ ಕಾರ್ಡ್ ರದ್ದು
ಪಿಎಂ ಕಿಸಾನ್ ಯೋಜನೆಯಡಿ ಭರ್ಜರಿ ಸಬ್ಸಡಿ! ಟ್ರ್ಯಾಕ್ಟರ್ಗಾಗಿ ಇಂದೇ ಅರ್ಜಿ ಸಲ್ಲಿಸಿ