ಹಲೋ ಸ್ನೇಹಿತರೇ, ಬಿಗ್‌ಬಾಸ್‌ನಲ್ಲಿ ಹನುಮಂತು ಸದ್ಯ ಬಹುತೇಕ ವೀಕ್ಷಕರ ಕ್ರಷ್ ಆಗಿದ್ದಾರೆ. ತಾನೊಬ್ಬ ಅತಿ ಬಡವ ಎಂದೇ ಹೇಳುತ್ತಲೇ ಹನುಮಂತರವರು ಎಲ್ಲರ ಮನಸ್ಸಗಳನ್ನು ಗೆಲ್ಲುತ್ತಿದ್ದಾರೆ. ಇದೀಗ ಅವರಿಗೆ ಭರ್ಜರಿ ಗಿಫ್ಟ್ ಸಿಕ್ಕಿದೆ. ಅವರ ಸಂತೋಷಕ್ಕೆ ಪಾರವೇ ಇಲ್ಲವಾಗಿದೆ. ಈ ಗಿಫ್ಟ್ ನೋಡಿ, ಬಿಗ್‌ಬಾಸ್ ಸ್ಪರ್ಧಿಗಳೂ ಕುಣಿದು ಕುಪ್ಪಳಿಸಿದ್ದಾರೆ. ಅಷ್ಟಕ್ಕೂ ಇದೇನಿದು ಗಿಫ್ಟ್? ಯಾಕೆ ಬಂತು? ಕೊಟ್ಟದ್ದು ಯಾರು ಎಂಬೆಲ್ಲಾ ಪ್ರಶ್ನೆಗೆ ಈ ಶೋ ವೀಕ್ಷಕರಿಗೆ ಇದಾಗಲೇ ಉತ್ತರವೂ ಕೂಡ ಸಿಕ್ಕಿರ ಬಹುದು. ಹೌದು. ಹನುಮಂತುಗೆ ಬಂದದ್ದು ದುಬಾರಿ ಬೆಲೆಬಾಳುವ ಬಟ್ಟೆಗಳನ್ನು ಸುದೀಪ್ ರವರು ಕಳುಹಿಸಿದ್ದಾರೆ ಇದನ್ನು ಹನುಮಂತು ಅವರು ಇಷ್ಟಪಟ್ಟಿದ್ದಾರೆ.

ಅಷ್ಟಕ್ಕೂ ಈ ಉಡುಗೊರೆ ಹಿಂದೆ ಕಾರಣವೂ ಇದೆ. ಅದೇನೆಂದ್ರೆ, ಹನುಮಂತು ಪ್ರತಿದಿನ ಸ್ನಾನ ಮಾಡುತ್ತಿರಲಿಲ್ಲ. ಅದು ಉಳಿದ ಸ್ಪರ್ಧಿಗಳ ಕಿರಿಕಿರಿಗೂ ಕಾರಣವಾಗಿತ್ತು. ಎಲ್ಲರೂ ನೀನು ಸ್ನಾನ ಮಾಡು ಅಂತನೇ ಹೇಳುತ್ತಿದ್ದರು. ಇದೇ ವಿಚಾರ ಕಿಚ್ಚ ಸುದೀಪ್ ಪಂಚಾಯ್ತಿಯಲ್ಲೂ ಬಂದಿತ್ತು. ಅವಾಗ ಸುದೀಪ್ ರವರು ಯಾಕೆ ಸ್ನಾನ ಮಾಡಲ್ಲ ಎಂದು ಪ್ರಶ್ನಿಸಿದ್ದರು. ಆಗ ಹನುಮಂತು ನೋವಿನಿಂದ ಬಟ್ಟೆ ಇಲ್ಲ ಸರ್. ತಂದಿರೋದೇ ಕಡಿಮೆ. ಅದಕ್ಕೆ ಜಳಕ ಮಾಡಲ್ಲ ಎಂದಿದ್ದರು. ಅಲ್ಲಿಗೆ ಸುದೀಪ್ ಸೈಲೆಂಟ್ ಆಗಿ ಬೇರೆ ಟಾಪಿಕ್ ಮಾತನಾಡಿದ್ದರು. ಇದ್ರ ಬೆನ್ನಲ್ಲೇ ಇದೀಗ ದುಬಾರಿಯಾದ ಬ್ರಾಂಡೆಡ್ ಬಟ್ಟೆಗಳನ್ನು ಕಳುಹಿಸಿ ಕೊಟ್ಟಿದ್ದಾರೆ. ಬ್ರಾಂಡೆಂಡ್ ಬಟ್ಟೆಗಳು, ಹೊಸ ಚೆಡ್ಡಿ, ಲುಂಗಿಯನ್ನು ಕಳುಹಿಸಿಕೊಡಲಾಗಿದೆ.
ಇದನ್ನು ಓದಿ: 2025ರಲ್ಲಿ ಎಷ್ಟು ಸಾರ್ವತ್ರಿಕ ರಜೆ? ಇಲ್ಲಿದೆ ಕಂಪ್ಲೀಟ್ ಅಪ್ಡೇಟ್
ಇವುಗಳನ್ನು ನೋಡಿ ಹನುಮಂತರವರು ಭಾವುಕರಾಗಿ ನನಗೆ ಇದನ್ನ ನಂಬೋದಕ್ಕೆ ಆಗುತ್ತಿಲ್ಲ. ತುಂಬಾ ಖುಷಿ ಆಗುತ್ತಾ ಇದೆ. ಥ್ಯಾಂಕ್ಯು ಸಾರ್ ಧನ್ಯವಾದಗಳು ಎಂದು ತಮ್ಮ ಅಭಿಮಾನವನ್ನು ಹೊರಹಾಕಿದ್ದಾರೆ. ಇದರ ಬೆಲೆಗಳನ್ನು ಎಲ್ಲರೂ ಟ್ಯಾಗ್‌ನಲ್ಲಿ ನೋಡಿ ಹೇಳುತ್ತಿದ್ದಾರೆ. ಹೊಸ ಶರ್ಟ್, ಹೊಸ ಬಟ್ಟೆಗಳ ಜೊತೆಗೆ ಚೆಡ್ಡಿಯನ್ನೂ ಕಳುಹಿಸಿದ್ದಾರೆ. ಚೆಡ್ಡಿಯನ್ನು ನೋಡಿದ ಉಳಿದ ಎಲ್ಲಾ ಸ್ಫರ್ಧಿಗಳು ಮೂರು ಸಾವಿರ ಚೆಡ್ಡಿ ಅಂತ ಹೇಳಿ ನಕ್ಕು, ನಕ್ಕು ಸುಸ್ತಾಗುವಂತೆ ಮಾಡಿದ್ದಾರೆ. ಈ ಮೂಲಕ ಬಿಗ್ ಬಾಸ್ ಮನೆಯಲ್ಲಿ ನಗುವಿನ ಹನಲು ಹೋರಬಂದಿದೆ.
ಇತರೆ ವಿಷಯಗಳು:
ಪಿಎಂ ಕಿಸಾನ್ ಯೋಜನೆಯಡಿ ಭರ್ಜರಿ ಸಬ್ಸಡಿ! ಟ್ರ್ಯಾಕ್ಟರ್‌ಗಾಗಿ ಇಂದೇ ಅರ್ಜಿ ಸಲ್ಲಿಸಿ
ರಾಜ್ಯದಲ್ಲಿ 22 ಲಕ್ಷ ರೇಷನ್ ಕಾರ್ಡ್ ರದ್ದು ನಿಮ್ಮ ಹೆಸರು ಇದೆಯಾ ನೋಡಿ !