ಹಲೋ ಸ್ನೇಹಿತರೇ, ಬಂಗಾಳಕೊಲ್ಲಿ ನೈಋತ್ಯ ಭಾಗದಿಂದ ವೇಗವಾಗಿ ಬಂದ ಚಂಡಮಾರುತವಾದ ‘ಫೆಂಗಲ್’ ಕರಾವಳಿಯ ಜಿಲ್ಲೆಗಳನ್ನು ತಲ್ಲಣಗೊಳಿಸಿದೆ. ಇನ್ನಿಲ್ಲದಂತೆ ಸರ್ಕಾರವು ಜನರನ್ನು ಕಾಡಿದ್ದು, ಭಾರೀ ಮಳೆಯನ್ನು ಸುರಿಸುತ್ತಿದೆ. ಬೆಂಗಳೂರು ಮತ್ತು ಕರ್ನಾಟಕ ಭಾಗದಲ್ಲಿ ಚಂಡಮಾರುತ ಎಫೆಕ್ಟ್ ಸಾಕಷ್ಟು ಪ್ರಮಾಣದಲ್ಲಿ ಉಂಟಾಗಿದೆ.

ಚಂಡಮಾರುತವು ಶನಿವಾರದಂದು ಪುದುಚೇರಿಯ ಕರಾವಳಿ ಭಾಗಕ್ಕೆ ಅಪ್ಪಳಿಸುತ್ತಿದ್ದಂತೆ ವೇಗವಾಗಿ ಕಡಿಮೆ ಆಗಲಿದೆ ಎಂದು ನಿರೀಕ್ಷಿಸಲಾಗಿತ್ತು. ಆದ್ರೆ ಪೂರ್ಣ ಪ್ರಮಾಣದಲ್ಲಿ ಇಳಿಕೆಯನ್ನು ಕಂಡಿಲ್ಲ. ಡಿಸೆಂಬರ್ 02 ರಂದು ಸೋಮವಾರದಂದು ತಮಿಳುನಾಡು ಭಾಗದಲ್ಲಿ ಮತ್ತು ಸಮುದ್ರ ಮಟ್ಟದಲ್ಲಿ ಸೈಕ್ಲೋನ್ ಪ್ರಭಾವ ಮುಂದುವರಿದಿದೆ. ಪರಿಣಾಮವನ್ನು ಚೆನ್ನೈ ಮತ್ತು ತಮಿಳುನಾಡು ಹಾಗೂ ಕರ್ನಾಟಕದ ಒಳನಾಡು ಭಾಗದಲ್ಲಿ ಭಾರೀ ಮಳೆಯನ್ನು ಸುರಿಯುತ್ತಿದೆ.
ಡಿಸೆಂಬರ್ 3ರಂದು ಮಂಗಳವಾರ ಕೂಡ ಈ ಕಡಿಮೆಯ ಒತ್ತಡದ ಪ್ರದೇಶವು (ಫೆಂಗಲ್ ಚಂಡಮಾರುತ) ಆಗ್ನೇಯ ದಿಕ್ಕಿನತ್ತ ಜೋರಾಗಿ ಬೀಸುವಂತಹ ಸಾಧ್ಯತೆಯನ್ನು ಇದೆ. ಉತ್ತರ ಕೇರಳ-ಕರ್ನಾಟಕ ಕರಾವಳಿಯ ಪೂರ್ವ-ಮಧ್ಯ ಅರೇಬಿಯನ್ ಸಮುದ್ರದ ಮಾರ್ಗವಾಗಿ ಸಾಗುವಂತಹ ನಿರೀಕ್ಷೆಯು ಸಹ ಇದೆ. ಅಲ್ಲಿಯವರೆಗೆ ವಿವಿಧೆಡೆ ಭಾರೀ ಮಳೆಯ ಮುಂದುವರಿಯಲಿದೆ ಎಂದು ಹವಾಮಾನವನ್ನು ತಜ್ಞರು ಮಾಹಿತಿ ನೀಡಿದ್ದಾರೆ.
ಈವರೆಗೆ ಚಂಡಮಾರುತದ ಪ್ರಭಾವದಿಂದ ಕರ್ನಾಟಕದ ದಕ್ಷಿಣ ಒಳನಾಡಿಗೆ ಮಾತ್ರ ಭಾರೀ ಮಳೆಯ ಆತಂಕವಿತ್ತು. ಆದ್ರೆ ಫೆಂಗಲ್ ಪೂರ್ವ ಅರಬ್ಬಿ ಸಮುದ್ರದತ್ತ ಸಾಗಿದ್ರೆ, ಕರ್ನಾಟಕ ಕರಾವಳಿ ಜಿಲ್ಲೆಗಳು ಹಾಗೂ ಮಲೆನಾಡು ಜಿಲ್ಲೆಗಳಿಗೂ ವ್ಯಾಪಕವಾದ ಮಳೆ ಆಗುವ ಸಾಧ್ಯತೆಯನ್ನು ಇದೆ.
ಇದನ್ನು ಓದಿ: ಪಿಎಂ ಕಿಸಾನ್ ಯೋಜನೆಯಲ್ಲಿ ಹೊಸ ರೂಲ್ಸ್.! ಈ ಕೆಲಸ ಮಾಡದಿದ್ರೆ ನಿಮಗಿಲ್ಲ 19ನೇ ಕಂತಿನ ಹಣ
ಕರ್ನಾಟಕ ಹವಾಮಾನ ವರದಿ: ರೆಡ್ ಅಲರ್ಟ್
ಇಂದಿನಿಂದ ಡಿಸೆಂಬರ್ 5ರವರೆಗೆ ರಾಜ್ಯದ ದಕ್ಷಿಣ ಕನ್ನಡ ಮತ್ತು ಉಡುಪಿ, ಉತ್ತರ ಕನ್ನಡ, ಬೀದರ್, ವಿಜಯಪುರ, ಬೆಳಗಾವಿ ಹಾಗೂ ಬಳ್ಳಾರಿ ಜಿಲ್ಲೆಗಳಲ್ಲಿ ಒಂದೆರಡು ಕಡೆಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವಂತಹ ಸಾಧ್ಯತೆಯಿದೆ.
ದಕ್ಷಿಣ ಒಳನಾಡಿನ ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ರಾಮನಗರ, ಮಂಡ್ಯ, ಹಾಸನ ಸೇರಿದಂತೆ ಇನ್ನಿತರ ಜಿಲ್ಲೆಗಳಲ್ಲಿ ಸಾಧಾರಣದಿಂದ ಭಾರೀ ಮಳೆ ಆಗಬಹದು. ಮುಂದಿನ 48 ಗಂಟೆಗಳ ಕಾಲದಲ್ಲಿಯು ಇದೇ ರೀತಿ ಮೋಡ ಕವಿದ ಚಳಿಯ ವಾತಾವರಣವೇ ಮುಂದುವರಿಯಲಿದೆ ಎಂದು ಐಎಂಡಿ ಮಳೆ ಮುನ್ಸೂಚನೆ ವರದಿ ತಿಳಿಸಿದೆ.
ಚಂಡಮಾರುತ ವಿಸ್ತರಣೆ ಆಗುತ್ತಿರುವ ಕಾರಣದಿಂದ ಮುಂದಿನ 24 ಗಂಟೆಯಲ್ಲಿ ಕೊಡಗು ಜಿಲ್ಲೆಗೆ ಗರಿಷ್ಠ 200 ಮಿ.ಮೀ.ಗೂ ಹೆಚ್ಚು ಮಳೆಯನ್ನು ನಿರೀಕ್ಷೆ ಇದ್ದು ‘ರೆಡ್ ಅಲರ್ಟ್’ ನೀಡಲಾಗಿದೆ. ಚಿಕ್ಕಮಗಳೂರು, ಶಿವಮೊಗ್ಗ ಹಾಗೂ ಮೈಸೂರು ಜಿಲ್ಲೆಗಳಲ್ಲಿ ಅತ್ಯಧಿಕ ಭಾರೀ ಮಳೆ ಅಂದ್ರೆ 130ರಿಂದ 200 ವರೆಗೆ ಧಾರಾಕಾರವಾದ ಮಳೆ ಆಗುವ ಪ್ರಯುಕ್ತವಾಗಿ ‘ಆರೆಂಜ್ ಅಲರ್ಟ್’ ನೀಡಲಾಗಿದೆ ಎಂದು ಸೋಮವಾರದ IMD ವರದಿಯನ್ನು ತಿಳಿಸಿದೆ.
ಇನ್ನೂ ರಾಜಧಾನಿ ಬೆಂಗಳೂರು ಸೇರಿದಂತೆ ಶಿವಮೊಗ್ಗ ವಿವಿಧ ಜಿಲ್ಲೆಗಳ ವ್ಯಾಪ್ತಿಯಲ್ಲಿ ಭಾರೀ ಮಳೆಯ ಕಾರಣಕ್ಕೆ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಆಯಾ ಜಿಲ್ಲಾಡಳಿತಗಳು ಶಾಲೆಗಳಿಗೆ ರಜೆ ನೀಡಿ ಆದೇಶಿಸಿವೆ. ಮಕ್ಕಳ ಸುರಕ್ಷತೆಗಾಗಿ, ಮುಂಜಾಗ್ರತಾ ಕ್ರಮಗಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ಇತರೆ ವಿಷಯಗಳು:
ಡಿಸೆಂಬರ್ 1 ರಿಂದ ಶಾಕಿಂಗ್ ರೂಲ್ಸ್.!! ಇನ್ನು ‘ಫೋನ್ ನಂಬರ್’ಗೆ ಬರಲ್ಲ ‘OTP’