ಬಂದೇ ಬಿಡ್ತು ಡಿಜಿಟಲ್ ರೇಷನ್ ಕಾರ್ಡ್.!! ಇದ್ರ ಉಪಯೋಗ ಏನು ಗೋತ್ತಾ??

ಹಲೋ ಸ್ನೇಹಿತರೇ, ಡಿಜಿಟಲ್ ಇಂಡಿಯಾ ಅಡಿಯಲ್ಲಿ ಕೇಂದ್ರವು ಹಲವು ಕಾರ್ಯಕ್ರಮಗಳನ್ನು ಕೈಗೊಳ್ಳುತ್ತಿದೆ. ಸಾರ್ವಜನಿಕರಿಗೆ ನೇರವಾಗಿಯೇ ಅನುಕೂಲವನ್ನು ಮಾಡಿಕೊಡುವ ಉದ್ದೇಶದಿಂದಲೇ ಎಲ್ಲಾ ರೀತಿಯ ಡೇಟಾ ಆನ್‌ಲೈನ್‌ನಲ್ಲಿ ಲಭ್ಯವಾಗುವಂತೆ ಮಾಡಲು ಸರ್ಕಾರವು ಪ್ರಯತ್ನಗಳನ್ನು ಮಾಡುತ್ತಿದೆ.

Digital Ration Card
Digital Ration Card

ಈ ವಿಭಾಗದಲ್ಲಿ ಪಡಿತರ ಚೀಟಿ ಡಿಜಿಟಲ್ (ಡಿಜಿಟಲ್ ರೇಷನ್ ಕಾರ್ಡ್) ರೂಪದಲ್ಲಿ ದೊರೆಯುವಂತೆ ಮಾಡುವಲ್ಲಿ ಸರ್ಕಾರವು ಯಶಸ್ವಿಯಾಗಿದೆ. ದೇಶದಲ್ಲಿ “ಒಂದು ರಾಷ್ಟ್ರ, ಒಂದು ಪಡಿತರ ಚೀಟಿ” ಯೋಜನೆ ಅನ್ನು ಜಾರಿಗೆ ತರಲು ಪ್ರಯತ್ನವನ್ನು ಮಾಡುತ್ತಿದೆ.

ಡಿಜಿಟಲ್ ಪಡಿತರ ಚೀಟಿಯ ಇದೊಂದು ಎಲೆಕ್ಟ್ರಾನಿಕ್ ಕಾರ್ಡ್ ಸಹ ಆಗಿದೆ. ಇದು ಪಡಿತರ ಚೀಟಿಯ ಡಿಜಿಟಲ್ ನ ಆವೃತ್ತಿಯಾಗಿದೆ. ಇದನ್ನು ಡೌನ್‌ಲೋಡ್ ಮಾಡುವುದರಿಂದ ಸಾರ್ವಜನಿಕ ವಿತರಣಾ ವ್ಯವಸ್ಥೆ (PDS) ಅಡಿಯಲ್ಲಿ ಆಹಾರ ಧಾನ್ಯಗಳು ಮತ್ತು ಇತರ ಅಗತ್ಯ ವಸ್ತುಗಳನ್ನು ಪಡೆಯುವುದು ಸುಲಭವಾಗುತ್ತದೆ. ಇದನ್ನು ಆನ್‌ಲೈನ್ ಅಥವಾ ಮೇರಾ ರೇಷನ್ 2.0 ಅಪ್ಲಿಕೇಶನ್ ಮೂಲಕವಾಗಿ ಸುಲಭವಾಗಿ ಡೌನ್ಲೋಡ್ ಅನ್ನು ಮಾಡಬಹುದು.

ಏನಿದು ಮೇರಾ ರೇಷನ್ 2.0 ಆಪ್?

  • ಡಿಜಿಟಲ್ ರೇಷನ್ ಕಾರ್ಡ್ ಡೌನ್‌ಲೋಡ್ ಮಾಡಿಕೊಳ್ಳಬಹುದು.
  • ವೈಯಕ್ತಿಕ ಮಾಹಿತಿಯನ್ನು ನವೀಕರಿಸಬಹುದು.
  • ಪಡಿತರ ಹಕ್ಕುಗಳ ಬಗ್ಗೆ ಮಾಹಿತಿಯನ್ನು ಪಡೆಯಬಹುದು.
  • ಕುಟುಂಬ ಸದಸ್ಯರನ್ನು ಸೇರಿಸುವ ಅಥವಾ ತೆಗೆದುಹಾಕುವಂತಹ ಸೇವೆಗಳನ್ನು ಪಡೆಯಬಹುದು.

ಇದನ್ನು ಓದಿ: ಕೇಂದ್ರ ಸಚಿವ ಸಂಪುಟದಿಂದ ಸಿಕ್ತು ಗ್ರೀನ್‌ ಸಿಗ್ನಲ್.!!‌ ಯಾವುದು ಈ ಹೊಸ ಸ್ಕೀಮ್?

ಅಪ್ಲಿಕೇಶನ್ ಡೌನ್‌ಲೋಡ್ ಮಾಡಲು ಹೀಗೆ ಮಾಡಿ…!

  • Android ಬಳಕೆದಾರರು: Google Play Store ನಿಂದ ಡೌನ್‌ಲೋಡ್ ಮಾಡಬಹುದು.
  • iOS ಬಳಕೆದಾರರು: Apple App Store ನಿಂದ ಡೌನ್‌ಲೋಡ್ ಮಾಡಬಹುದು.
  • ಸ್ಮಾರ್ಟ್‌ಫೋನ್‌ನಲ್ಲಿ ಮೇರಾ ರೇಷನ್ 2.0 ಅಪ್ಲಿಕೇಶನ್ ಅನ್ನು install ಅನ್ನು ಮಾಡಿಕೊಳ್ಳಿ.
  • ಅಪ್ಲಿಕೇಶನ್ ಅನ್ನು ತೆರೆಯಿರಿ.
  • ಪರದೆಯ ಮೇಲೆಯೇ ತೋರಿಸಿರುವ ನಿಮ್ಮ ಆಧಾರ್ ಸಂಖ್ಯೆ, ಕ್ಯಾಪ್ಚಾ ಕೋಡ್ ಅನ್ನು ನಮೂದಿಸಿ.
  • ೧೧೭“ಪರಿಶೀಲಿಸು” ಬಟನ್ ಕ್ಲಿಕ್ ಮಾಡಿ. ನಿಮ್ಮ ನೋಂದಾಯಿತವಾದ ಮೊಬೈಲ್ ಸಂಖ್ಯೆಗೆ OTP ಬರುತ್ತದೆ.
  • OTP ಅನ್ನು ನಮೂದಿಸಿ ಮತ್ತು “ಪರಿಶೀಲಿಸು” ಕ್ಲಿಕ್ ಮಾಡಿ.
  • ಪರಿಶೀಲನೆಯ ನಂತರ, ಡಿಜಿಟಲ್ ಪಡಿತರ ಚೀಟಿ ಪರದೆಯ ಮೇಲೆ ಕಾಣಿಸುತ್ತದೆ. ಅದನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ ಅಥವಾ ಮೊಬೈಲ್ ನಲ್ಲಿ save ಮಾಡಿಕೊಳ್ಳಿ.

ಡಿಜಿಟಲ್ ಪಡಿತರ ಚೀಟಿಯ ಪ್ರಯೋಜನಗಳು

  • ಅದನ್ನು ಎಲ್ಲಿಯಾದರೂ, ಯಾವುದೇ ಸಮಯದಲ್ಲಿ ಬಳಸಬಹುದು.
  • ಕಾರ್ಡ್ ಕಳೆದುಕೊಳ್ಳುವ ಭಯವಿಲ್ಲ.
  • ಎಲ್ಲ ದಾಖಲೆಗಳೂ ಡಿಜಿಟಲ್ ಆಗಿರುವುದರಿಂದ ವಂಚನೆಯಾಗುವ ಸಾಧ್ಯತೆ ಕಡಿಮೆ.
  • ಇ-ರೇಷನ್ ಕಾರ್ಡ್ ಅನ್ನು ಹೇಗೆ ಪರಿಶೀಲಿಸುವುದು
  • ಇ-ಪಡಿತರ ಕಾರ್ಡ್ ನ ಮಾಹಿತಿಯನ್ನು ಪರಿಶೀಲಿಸಲು ಬಯಸಿದ್ರೆ, ರಾಜ್ಯ ಆಹಾರ ನಾಗರೀಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆಗೆ ಭೇಟಿಯನ್ನು ನೀಡಿ.

ಇತರೆ ವಿಷಯಗಳು:

‘ಚಿಕನ್’ ಪ್ರಿಯರಿಗೆ ಬ್ಯಾಡ್ ನ್ಯೂಸ್.!! ಈ ವಿಷ್ಯ ಕೇಳಿದ್ರೆ ನೀವು ಶಾಕ್‌ ಆಗ್ತಿರಾ

ರೈತರೇ ಇತ್ತ ಕಡೆ ಗಮನಕೊಡಿ.!! ಈ ಯೋಜನೆಯಡಿ ನಿಮ್ಮದಾಗಲಿದೆ 3 ಲಕ್ಷ ರೂಪಾಯಿ

Leave a Comment

rtgh