ಹಲೋ ಸ್ನೇಹಿತರೇ, ಈ ಸುದ್ದಿಯ ಸತ್ಯಾಸತ್ಯತೆಯನ್ನು ಟಿವಿ9 ಕನ್ನಡ ಪರಿಶೋದಿಸಿದಾಗ ಸುಳ್ಳು ಹೇಳಿಕೆಯೊಂದಿಗೆ ಈ ವಿಡಿಯೋ ವೈರಲ್ ಆಗುತ್ತಿದೆ ಎಂದು ಕಂಡುಬಂದಿದೆ. ಈ ರೀತಿಯ ಯಾವುದೇ ಯೋಜನೆಯನ್ನು ಕೇಂದ್ರ ಸರ್ಕಾರವು ನಡೆಸುತ್ತಿಲ್ಲ. ವಾಸ್ತವವಾಗಿ ಇದು ವೈರಲ್ ವೆಬ್‌ಸೈಟ್‌ನಲ್ಲಿ ಈ ರೀತಿಯ ನಕಲಿ ಸುದ್ದಿಗಳನ್ನು ಪ್ರಕಟಿಸಲಾಗುತ್ತಿದೆ ಎಂದು ಘೋಷಿಸಿದ್ದಾರೆ.

ಕೇಂದ್ರ ಸರ್ಕಾರದ ಪ್ರಧಾನಮಂತ್ರಿ ಉಚಿತವಾಗಿ ಸ್ಕೂಟಿ ಯೋಜನೆಯ ಆರಂಭಿಸಿದೆ ಎಂಬ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ಬಿತ್ತರಿಸಲಾಗುತ್ತಿದೆ. ಈ ಯೋಜನೆ ಅಡಿ ಸರ್ಕಾರದ ಎಲ್ಲಾ ಹೆಣ್ಣು ಮಕ್ಕಳಿಗೆ ಉಚಿತವಾಗಿ ಸ್ಕೂಟರ್ ಅನ್ನು ನೀಡುತ್ತಿದೆ. ಉಚಿತ ಸ್ಕೂಟಿ ಅನ್ನು ಪಡೆಯಲು, ಖಬರ್ ಬಜಾರ್.ಇನ್ ವೆಬ್‌ಸೈಟ್‌ಗೆ ಭೇಟಿಯನ್ನು ನೀಡಿ ಮತ್ತು ಅದರಲ್ಲಿರುವ ಫಾರ್ಮ್ ಅನ್ನು ಭರ್ತಿ ಮಾಡಲು ನಿಮ್ಮನ್ನು ಕೇಳಲಾಗುತ್ತಿದೆ.
ವೈರಲ್ ಆಗುತ್ತಿರುವುದು ಏನು?
ಇನ್ಸ್ಟಾಗ್ರಾಮ್ ಬಳಕೆದಾರರೊಬ್ಬರು ಡಿಸೆಂಬರ್ 11, 2024 ರಂದು ಈ ವೈರಲ್ ಪೋಸ್ಟ್ ಅನ್ನು ಹಂಚಿಕೊಂಡು, ‘ಈಗ ಸರ್ಕಾರವು ಪ್ರತಿ ಹೆಣ್ಣು ಮಗುವಿಗೆ ಉಚಿತ ಸ್ಕೂಟಿ ನೀಡುತ್ತಿದೆ. ಅರ್ಜಿಯನ್ನು ಸಲ್ಲಿಸಲು, khabarbazar.in ಸೈಟ್‌ಗೆ ಹೋಗಿ ಹಾಗೂ ಫಾರ್ಮ್ ನ್ನು ಭರ್ತಿಯನ್ನು ಮಾಡಿ’ ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ: ಟೊಮೆಟೊ, ಕೊತ್ತಂಬರಿ ಆಯ್ತು.!! ಈಗ ಈರುಳ್ಳಿ, ಬೆಳ್ಳುಳ್ಳಿ ಬೆಲೆನೂ ಗಗನಕ್ಕೆ
ಸೈಬರ್ ತಜ್ಞ ಮತ್ತು ಸೈಬರ್ ಅಪರಾಧ ಹಾಗೂ ಸೈಬರ್ ಕಾನೂನಿನ ಸಂಶೋಧನಾ ಕೇಂದ್ರದ ಅಧ್ಯಕ್ಷರಾದ ಅನುಜ್ ಅಗರ್ವಾಲ್ ಈ ಕುರಿತು ಹೇಳಿಕೆಯನ್ನು ನೀಡಿರುವುದು ನಮಗೆ ಸಿಕ್ಕಿದೆ. ಅವರು ಹೇಳಿಕೆಯ ಪ್ರಕಾರ, ಇದು ಕ್ಲಿಕ್‌ಬೈಟ್ ಲಿಂಕ್ ಆಗಿದೆ. ಬಳಕೆದಾರರು ಈ ಮೂಲಕವಾಗಿ ವೀವ್ಸ್ ಮತ್ತು ಲೈಕ್ಸ್ ಪಡೆಯಲು ಬಯಸುತ್ತಾರೆ, ಇದರಿಂದ ಅವರು ಹಣವನ್ನು ಗಳಿಸಬಹುದು ಎಂದಿದ್ದಾರೆ.ನಾವು ಈ ವೆಬ್‌ಸೈಟ್‌ನ ಬಗ್ಗೆ ಗೂಗಲ್‌ನಲ್ಲಿಯೂ ಹುಡುಕಿದ್ದೇವೆ. ಈ ವೆಬ್‌ಸೈಟ್ ಅನ್ನು ಅಪಾಯಕಾರಿ ಮತ್ತು ಡೇಟಾ ಕದಿಯುವ ಸಾಧನ ಎಂದು ಸಿಸ್ಟಮ್ ನಮಗೆ ಎಚ್ಚರಿಕೆಯನ್ನು ನೀಡಿದೆ.
ಈ ಮೂಲಕವಾಗಿ ಟಿವಿ9 ಕನ್ನಡ ತನ್ನ ತನಿಖೆಯಲ್ಲಿ ಉಚಿತವಾಗಿ ಸ್ಕೂಟಿ ಯೋಜನೆ ಹೆಸರಿನಲ್ಲಿ ವೈರಲ್ ಹಕ್ಕು ಸುಳ್ಳು ಎಂದು ಕಂಡುಹಿಡಿದಿದೆ. ಆ ರೀತಿಯ ಯಾವುದೇ ಯೋಜನೆಯನ್ನು ಕೇಂದ್ರ ಸರ್ಕಾರದ ನಡೆಸುತ್ತಿಲ್ಲ. ವಾಸ್ತವವಾಗಿಯೇ ವೈರಲ್ ವೆಬ್‌ಸೈಟ್‌ನಲ್ಲಿ ಇದೇ ರೀತಿಯಾದ ಕೆಲವೊಂದು ನಕಲಿ ಸುದ್ದಿಯನ್ನು ವರದಿಯಾಗಿದೆ. ವೀವ್ಸ್ ಹಾಗೂ ಲೈಕ್ಸ್ ಪಡೆಯಲು ವೆಬ್‌ಸೈಟ್ ಲಿಂಕ್‌ಗಳು ಮತ್ತು ವಿಡಿಯೋಗಳನ್ನು ಸುಳ್ಳು ಮಾಹಿತಿಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ. ಇದೊಂದು ಹಣವನ್ನು ಗಳಿಸುವ ತಂತ್ರವಾಗಿದೆ.
ಇತರೆ ವಿಷಯಗಳು:
ಪಿಎಂ ಕಿಸಾನ್ ಯೋಜನೆಯಲ್ಲಿ ಹೊಸ ರೂಲ್ಸ್.! ಈ ಕೆಲಸ ಮಾಡದಿದ್ರೆ ನಿಮಗಿಲ್ಲ 19ನೇ ಕಂತಿನ ಹಣ
ರೈತರಿಗೆ ಕೇಂದ್ರದಿಂದ ಸಿಹಿ ಸುದ್ದಿ.!! ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆ ಘೋಷಣೆ