ಹಲೋ ಸ್ನೇಹಿತರೇ, ಮಳೆ ಹೆಚ್ಚಾಗಿ ಆಗದ ರೈತರ ಪಾಲಿಗೆ ಕೊಳವೆ ಬಾವಿಯೇ ಮೂಲಾಧಾರ. ಗಂಗಾ ಕಲ್ಯಾಣ ಯೋಜನೆಯನ್ನು ಬಡ ಹಾಗೂ ಮಧ್ಯಮ ವರ್ಗದ ರೈತರು ಜಮೀನಿಗೆ ಉಚಿತವಾಗಿ ಕೊಳವೆಬಾವಿಯನ್ನು ಕೊರೆಸಿಕೊಡುವ ಉದ್ದೇಶದಿಂದ ಗಂಗಾ ಕಲ್ಯಾಣ ಯೋಜನೆಯನ್ನು ಜಾರಿಗೆ ತರಲಾಗಿದೆ. ಹಲವಾರು ರೈತರು ಇಂದಿಗೂ ಮಳೆಯನ್ನೇ ಆಶ್ರಯಿಸಿಕೊಂಡು ಜಮೀನು ಕಾರ್ಯದಲ್ಲಿ ತೊಡಗಿದ್ದಾರೆ.

ಕಾರಣ ಅವರಲ್ಲಿ ಕೊಳವೆ ಬಾವಿ ತೋಡಿಸುವಷ್ಟು ಆರ್ಥಿಕ ಶಕ್ತಿ ಇಲ್ಲದಿರುವುದು. ಈ ಕಾರಣಕ್ಕೆ ಸರ್ಕಾರವೇ ಉಚಿತವಾಗಿ ಈ ಸೌಲಭ್ಯಗಳನ್ನು ರೈತರಿಗೆ ಇದನ್ನು ನೀಡುತ್ತಿದೆ. ನೀವು ಸದುಪಯೋಗಪಡಿಸಿಕೊಳ್ಳಿ.
ಯೋಜನೆ ಏನು? : ಕೊಳವೆ ಬಾವಿ (ಬೋರ್ ವೆಲ್) ಕೊರೆಯುವ ಹಾಗೂ ತೆರೆದ ಬಾವಿ ತೋಡುವ ಮೂಲಕವಾಗಿ ಕೃಷಿ ಭೂಮಿಗೆ ನೀರನ್ನು ಪೂರೈಸುವುದೇ ಗಂಗಾ ಕಲ್ಯಾಣ ಯೋಜನೆ. ವಿದ್ಯುತ್ ಸಂಪರ್ಕ ಕಲ್ಪಿಸಿ ಪಂಪ್ ಹಾಗೂ ಮೋಟಾರ್ ಮೂಲಕವಾಗಿ ನೀರೆತ್ತುವುದು ಈ ಯೋಜನೆಯ ಉದ್ದೇಶ.
ಪ್ರಮುಖವಾಗಿ ಕೃಷಿಗೆ ಉತ್ತೇಜನವನ್ನು ನೀಡುವ ಉದ್ದೇಶದಿಂದ ಸರ್ಕಾರ ಮತ್ತು ಸಣ್ಣ ಹಾಗೂ ಅತಿ ಸಣ್ಣ ರೈತರಿಗೆ ಗಂಗಾ ಕಲ್ಯಾಣ ಯೋಜನೆಯನ್ನು ತಂದಿದೆ. ಉಚಿತವಾಗಿ ಕೊಳವೆ ಬಾವಿ (ಬೊರ್ ವೆಲ್ )/ ತೆರೆದ ಬಾವಿ ನಿರ್ಮಾಣಕ್ಕೆ ಈ ಯೋಜನೆ ಅಡಿ ಧನ ಸಹಾಯವನ್ನು ಪಡೆಯಬಹುದು. ಇದಕ್ಕೆ ಬಜೆಟ್ನಲ್ಲಿ ಬಿಡುಗಡೆಯಾದ ಅನುದಾನದ ಆಧಾರದ ಮೇಲೆ ಗಂಗಾ ಕಲ್ಯಾಣ ಯೋಜನೆಗೆ ಹಣವನ್ನು ಬಿಡುಗಡೆ ಆಗಲಿದೆ.
ಅನ್ವಯವಾಗುವ ಜಿಲ್ಲೆಗಳ್ಯಾವುವು, ಸಹಾಯಧನವೆಷ್ಟು? : ಅಂತರ್ಜಲವನ್ನು ಕಡಿಮೆಯಾಗಿರುವ ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಚಿಕ್ಕಬಳ್ಳಾಪುರ, ಕೋಲಾರ, ತುಮಕೂರು, ರಾಮನಗರ ಜಿಲ್ಲೆಗಳಿಗೆ ಈ ಯೋಜನೆ ಅನ್ವಯವಾಗುತ್ತದೆ. ಈ ಯೋಜನೆಯಡಿ ಘಟಕದ ವೆಚ್ಚವನ್ನು ನಾಲ್ಕು ಲಕ್ಷ ರೂ. ಗಳಿಗೆ ನಿಗದಿಪಡಿಸಲಾಗಿದೆ.
ಮೂರುವರೆ ಲಕ್ಷ ಸಹಾಯಧನ ಸಿಗಲಿದೆ. ಬಾಕಿ 50 ಸಾವಿರ ರೂ.ಗಳನ್ನು ಶೇ.4 ರ ಬಡ್ಡಿಯಂತೆ ತೀರಿಸಬೇಕಾಗುತ್ತದೆ. ಇತರ ಜಿಲ್ಲೆಗಳ ರೈತರಿಗೆ 2 ಲಕ್ಷ ಸಹಾಯಧನವಿದ್ದು, 50 ಸಾವಿರ ರೂ.ಗಳನ್ನು ವಾರ್ಷಿಕವಾಗಿ ಶೇ. 4 ರ ಬಡ್ಡಿಯಂತೆ ಸಾಲವನ್ನು ತೀರಿಸಬೇಕಾಗುತ್ತದೆ.
ಇದನ್ನು ಓದಿ: ಪಿಎಂ ಕಿಸಾನ್ ಯೋಜನೆಯಲ್ಲಿ ಹೊಸ ರೂಲ್ಸ್.! ಈ ಕೆಲಸ ಮಾಡದಿದ್ರೆ ನಿಮಗಿಲ್ಲ 19ನೇ ಕಂತಿನ ಹಣ
ಗಂಗಾ ಕಲ್ಯಾಣ ಯೋಜನೆಗೆ ಅರ್ಜಿ ಕರೆಯುವ ನಿಗಮಗಳ್ಯಾವುವು: ಡಾ. ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮ, ಬಾಬು ಜಗಜೀವನರಾಮ ಅಭಿವೃದ್ಧಿ ನಿಗಮ, ಭೋವಿ ಅಭಿವೃದ್ಧಿ ನಿಗಮ, ತಾಂಡಾ ಅಭಿವೃದ್ಧಿ ನಿಗಮ, ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮ, ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ, ಪರಿಶಿಷ್ಟ ಜಾತಿ, ವರ್ಗಗಳ ಅಭಿವೃದ್ಧಿ ನಿಗಮ, ಕರ್ನಾಟಕ ಆದಿ ಜಾಂಬವ ಅಭಿವೃದ್ಧಿ ನಿಗಮ, ಕರ್ನಾಟಕ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ, ಅಲ್ಪ ಸಂಖ್ಯಾತರ ಅಭಿವೃದ್ಧಿ ನಿಗಮ, ಬೋವಿ ಸಮುದಾಯದ ಅಭಿವೃದ್ಧಿ ನಿಗಮ.
ಯೋಜನೆ ಪಡೆಯುವ ಅರ್ಹರು ಯಾರು? : ಪ್ರವರ್ಗ 1,2ಎ,3ಎ,3ಬಿ ಹಿಂದುಳಿದ ವರ್ಗಕ್ಕೆ ಸೇರಿರಬೇಕು. ಸಣ್ಣ ಮತ್ತು ಅತಿ ಸಣ್ಣ ರೈತರಾಗಿಬೇಕು. ಕನಿಷ್ಠ 1.20 ಎಕರೆ ಮತ್ತು ಗರಿಷ್ಠ 5 ಎಕರೆ ಜಮೀನು ಹೊಂದಿರಬೇಕು. ಅರ್ಜಿದಾರರು ಯಾವುದೇ ಸರ್ಕಾರಿ ಹುದ್ದೆಯಲ್ಲಿ ಇರಬಾರದು. ನೀವು ರಾಜ್ಯದ ಕಾಯಂ ನಿವಾಸಿಯಾಗಿರಬೇಕು.
ಠೇವಣಿ ಎಷ್ಟು : ಕೊಳವೆ ಬಾವಿಯನ್ನು ಕೊರೆಸಲು ವೈಯಕ್ತಿಕವಾಗಿ ಪಾವತಿಸಬೇಕಾದ ಠೇವಣಿ ಈ ಕೆಳಕಂಡಂತೆ ಇದೆ. ನೋಂದಣಿ ಶುಲ್ಕ 50 ರೂ., ಜೊತೆಗೆ ಶೇ.18 ರಷ್ಟು ಜಿಎಸ್ ಟಿ. ಭದ್ರತಾ ಠೇವಣಿ ಶುಲ್ಕ 1290 ರೂ., 1 ಎಚ್ ಪಿಗೆ. ಮೀಟರ್ ಸುರಕ್ಷಾ ಠೇವಣಿ 3 ಸಾವಿರ ರೂ. ಮತ್ತು ಮೀಟರ್ ಬಾಕ್ಸ್ 2100 ರೂ. ಮೇಲ್ವಿಚಾರಣಾ ಶುಲ್ಕ 150 ರೂ. ಜೊತೆಗೆ ಜಿಎಸ್ ಟಿ ಶೇ. 18 ರೂ.
ಬೇಕಿರುವ ದಾಖಲೆ ಏನು? : ಆಸಕ್ತರು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಫಲಾನುಭವಿಗಳ ಭಾವಚಿತ್ರ ಮತ್ತು ಬ್ಯಾಂಕ್ ಪಾಸ್ ಬುಕ್, ಹೊಲದ ದಾಖಲೆ ಹಾಗೂ ಜಾತಿ-ಆದಾಯ ಪ್ರಮಾಣ ಪತ್ರ, ಆಧಾರ್ ಕಾರ್ಡ್, ಪಾನ್ ಕಾರ್ಡ್ ಕಡ್ಡಾಯವಾಗಿದೆ.
ಇತರೆ ವಿಷಯಗಳು:
ಡಿಸೆಂಬರ್ 1 ರಿಂದ ಶಾಕಿಂಗ್ ರೂಲ್ಸ್.!! ಇನ್ನು ‘ಫೋನ್ ನಂಬರ್’ಗೆ ಬರಲ್ಲ ‘OTP’