ವಾಹನ ಚಾಲಕರಿಗೆ ಬಂಪರ್‌ ನ್ಯೂಸ್.!! ಯಾವ ರಾಜ್ಯ ಮಾಡದ್ದನ್ನು ಮಾಡಿದ ಕರ್ನಾಟಕ

ಹಲೋ ಸ್ನೇಹಿತರೇ, ಖಾಸಗಿ ವಾಹನ ಚಾಲಕ ಸಮೂಹದ ಹಲವು ದಶಕಗಳ ಕನಸು. ಚಾಲಕರಿಗಾಗಿ ನಿಗಮ ಮಂಡಳಿ ಬೇಕು ಎನ್ನುವುದು ಆ ಮಂಡಳಿಯಿಂದ ಇದೀಗ ದೇಶದಲ್ಲೇ ಯಾವುದೇ ರಾಜ್ಯದ ಚಾಲಕರಿಗೆ ನೀಡದ ಸೌಲಭ್ಯ ಮತ್ತು ಸವಲತ್ತುಗಳನ್ನು ನೀಡಲು ಮುಂದಾಗಿದೆ, ಕರ್ನಾಟಕದ ಯಾವುದೇ ಖಾಸಗಿ ಆಸ್ಪತ್ರೆಯಲ್ಲು ಉಚಿತವಾಗಿ ಚಿಕಿತ್ಸೆ ಪಡೆದುಕೊಳ್ಳುವ ವ್ಯವಸ್ಥೆ ಮಾಡಲಾಗಿದೆ.

Good news for private vehicle drivers
Good news for private vehicle drivers

ಕರ್ನಾಟಕದ ಚಾಲಕ ಸಮೂಹದ ಹಲವು ದಶಕಗಳ ಕನಸು ನನಸಾಗಿದೆ. ಖಾಸಗಿ ಚಾಲಕರಿಗಾಗಿಯೇ ಅಭಿವೃದ್ಧಿ ನಿಗಮ ಮಂಡಳಿ ಬೇಕು ಎನ್ನುವ ಬೇಡಿಕೆಯನ್ನು ಈಡೇರಿದೆ. ಖಾಸಗಿ ಚಾಲಕರ ಅಭಿವೃದ್ಧಿ ನಿಗಮ ಮಂಡಳಿಯ ಮೂಲಕವಾಗಿ ಕರ್ನಾಟಕ ರಾಜ್ಯ ಸಾರಿಗೆ ಇಲಾಖೆಯಡಿಯಲ್ಲಿ ಚಾಲಕರಿಗೆ ಆರೋಗ್ಯ ಕಾರ್ಡ್ ನೀಡಲು ತಿರ್ಮಾನ ಮಾಡಲಾಗಿದೆ. ದೇಶದಲ್ಲಿ ಮೊದಲ ಬಾರಿಗೆ ಇಂತಹ ಸೌಲಭ್ಯವನ್ನು ರಾಜ್ಯ ಸರ್ಕಾರ ನೀಡಲು ಮುಂದಾಗಿದೆ.

ಈ ಹಿಂದೆ ಚಾಲಕರು ಆಕ್ಸಿಡೆಂಟ್ ನಲ್ಲಿ ಮೃತಪಟ್ಟರೇ ಅಂತಹ ಕುಟುಂಬಕ್ಕೆ 5 ಲಕ್ಷ ರುಪಾಯಿ ಪರಿಹಾರವನ್ನು ನೀಡಲಾಗಿತ್ತು, ಇದೀಗ ಸರ್ಕಾರವು ಚಾಲಕ ಅಭಿವೃದ್ಧಿ ನಿಗಮ ಮಂಡಳಿಯಲ್ಲಿ ನೋಂದಾಯಿತ ಚಾಲಕರು ಆಕ್ಸಿಡೆಂಟ್ ಹಾಗೂ ಸಹಜವಾಗಿ ಮೃತಪಟ್ಟರೇ ಅಂತಹ ಚಾಲಕರಿಗೆ ಐದು ಲಕ್ಷ ರುಪಾಯಿ ಪರಿಹಾರ ನೀಡಲಾಗುತ್ತದೆ.

ಚಾಲಕರಿಗೆ ಏನೆಲ್ಲ ಸೌಲಭ್ಯ ?

ಇನ್ನೂ ಅಧಿವೇಶನದಲ್ಲಿ ಪಾಸ್ ಆಗಿರುವ ಬಿಲ್ ನಲ್ಲಿ ಚಾಲಕರಿಗೆ ಏನೆಲ್ಲ ಸೌಲಭ್ಯ ಸಿಗುತ್ತದೆ ಎಂದು ನೋಡುವುದಾದರೆ, ನೋಂದಾಯಿತ ಸದಸ್ಯರು ರಾಜ್ಯದಲ್ಲಿ ಯಾವುದೇ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆಯಲು 5 ಲಕ್ಷ ರೂ ವರೆಗೆ ಕ್ಯಾಶ್ಲೆಸ್ ವ್ಯವಸ್ಥೆ. 50 ರಿಂದ 1 ಲಕ್ಷದವರೆಗೆ ಯಾವುದೇ ಕಾಯಿಲೆಗೆ ಖಾಸಗಿ ಆಸ್ಪತ್ರೆಯಲ್ಲಿ ಅಡ್ಮಿಟ್ ಆಗಿ ಚಿಕಿತ್ಸೆ ಪಡೆದುಕೊಂಡು ಬಿಲ್ ಪಾವತಿ ಮಾಡಿದ್ರೆ, ಆ ಬಿಲ್ ನಲ್ಲಿ ಒಂದು ಲಕ್ಷ ರುಪಾಯಿವರೆಗೆ ಹಣವನ್ನು ಮಂಡಳಿಗೆ ಬಿಲ್ ನೀಡಿ ಮರುಪಾವತಿ ಮಾಡಿಕೊಳ್ಳಬಹುದು.

ಇದನ್ನು ಓದಿ: ರಾಜ್ಯದ ಜನತೆಗೆ ಮತ್ತೊಂದು ಶಾಕ್.!! ‘ಕಾವೇರಿ’ ನೀರಿನ ದರ ಏರಿಕೆ

ಮಹಿಳಾ ಚಾಲಕಿಯರಿಗೆ ಏನು?

ಮಹಿಳಾ ಚಾಲಕಿಯರಿಗಾಗಿ ಎರಡು ಮಕ್ಕಳಿಗೆ ಹೆರಿಗೆ ಭತ್ಯೆಯ ರೂಪದಲ್ಲಿ ತಲಾ 10,000 ರುಪಾಯಿಯನ್ನು ನೀಡಲಾಗುತ್ತದೆ. ನೋಂದಾಯಿಸಲ್ಪಟ್ಟ ಚಾಲಕರಿಗೆ ಆಕ್ಸಿಡೆಂಟ್ ನಲ್ಲಿ ಮೃತಪಟ್ಟರೇ ಆರೀತಿಯ ಚಾಲಕನ ಮಕ್ಕಳಿಗೆ 1 ರಿಂದ ಡಬಲ್ ಡಿಗ್ರಿವರೆಗೆ ಹತ್ತು ಸಾವಿರದಿಂದ 25 ಸಾವಿರದವರೆಗೆ ಸಹಾಯಧನ ನೀಡಲಾಗುತ್ತದೆ. ಯಾರಿಗೆಲ್ಲ ಈ ಸೌಲಭ್ಯವು ದೊರೆಯುತ್ತದೆ ಎಂದು ನೋಡುವುದಾದರೆದ್ರೆ ಚಾಲಕರು, ಖಾಸಗಿ ಬಸ್ ಕಂಡಕ್ಟರ್, ಕ್ಲಿನರ್ ಮತ್ತು ಮೆಕಾನಿಕ್, ವಾಹನಗಳ ಪೇಂಟರ್, ವೆಲ್ಡರ್ಸ್ ಹಾಗೂ ಬಾಡಿ ಬಿಲ್ಡರ್ಸ್‌ಗಳು ಪಡೆದುಕೊಳ್ಳಬಹುದು.

ಆದ್ರೆ ಚಾಲಕ ಅಭಿವೃದ್ಧಿ ನಿಗಮ ಮಂಡಳಿಯಲ್ಲಿ ನೋಂದಾಯಿಸಿಕೊಂಡಿರಬೇಕಷ್ಟೇ ಎಂದು ಖಾಸಗಿ ಸಾರಿಗೆ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ನಟರಾಜ್ ಶರ್ಮ. ಒಟ್ಟಿನಲ್ಲಿ ದೇಶದ ಯಾವುದೇ ಸರ್ಕಾರವು ಮಾಡದ್ದನ್ನ ರಾಜ್ಯ ಕಾಂಗ್ರೆಸ್ ಸರ್ಕಾರ ಮಾಡಲು ಮುಂದಾಗಿರೋದು ನಿಜಕ್ಕೂ ಚಾಲಕರ ಹಲವು ದಶಕಗಳ ಕನಸನ್ನು ನನಸು ಮಾಡಲು ಮುಂದಾಗಿದೆ.

ಇತರೆ ವಿಷಯಗಳು:

ಜ.1ರಿಂದ ಈ ನಿಯಮ ಫುಲ್ ಚೇಂಜ್.!! ರೀಚಾರ್ಚ್‌ ಬೆಲೆ ಮತ್ತೆ ಹೆಚ್ಚಳ

ರಾಜ್ಯದ `SC-ST’ ಯವರಿಗೆ ಗುಡ್ ನ್ಯೂಸ್.!! ವಕೀಲರ ನೇಮಕಾತಿಯಲ್ಲಿ ಶೇ. 24ರಷ್ಟು ಮೀಸಲಾತಿ ಜಾರಿ

Leave a Comment

rtgh