ಹಲೋ ಸ್ನೇಹಿತರೇ, ಸಂವಿಧಾನದಲ್ಲಿ ಎಲ್ಲರೂ ಬದುಕುವ, ಉದ್ಯೋಗ ಪಡೆಯುವಂತಹ ಅವಕಾಶವನ್ನು ಕಲ್ಪಿಸಿದೆ. ವಿಕಲಚೇತನರು ಸಮಾಜಕ್ಕೆ ಹೊರೆಯಲ್ಲ. ಅವರು ಸಮಾಜದ ಆಸ್ತಿಯಾಗಿದ್ದು, ಎಲ್ಲ ಕ್ಷೇತ್ರಗಳಲ್ಲಿಯೂ ಸಾಧನೆ ಮಾಡುತ್ತಿದ್ದಾರೆ. ಈ ಬಾರಿಯ ವಿಶ್ವ ವಿಕಲಚೇತನರ ದಿನಾಚರಣೆಯನ್ನು “ಸಮಗ್ರ ಹಾಗೂ ಸುಸ್ಥಿರವಾದ ಭವಿಷ್ಯಕ್ಕಾಗಿ ವಿಕಲಚೇತನದ ವ್ಯಕ್ತಿಗಳಲ್ಲಿ ನಾಯಕತ್ವದ ಉತ್ತೇಜನ” ಎಂಬ ಘೋಷ ವಾಕ್ಯದೊಂದಿಗೆ ಆಚರಿಸಿದ್ದೇವೆ ಎಂದು ಸಿಎಂ ಸಿದ್ಧರಾಮಯ್ಯರವರು ತಿಳಿಸಿದ್ದಾರೆ.

ಈ ವರ್ಷಗಳಲ್ಲಿ ನಾಲ್ಕು ಬಗೆಯ ವಿಕಲಚೇತನರ ಆರೈಕೆದಾರರಿಗೆ ಪ್ರತಿ ಮಾಹೆಯು 1000 ರೂ. ಗಳ ಆರೈಕೆದಾರರ ಭತ್ಯೆಯನ್ನು ನೀಡುವ ಯೋಜನೆಯನ್ನು ದೇಶದಲ್ಲಿ ಪ್ರಪ್ರಥಮವಾಗಿ ಕರ್ನಾಟಕ ರಾಜ್ಯದ ಘೋಷಿಸಿದೆ, ಇದನ್ನು ಪ್ರಸಕ್ತ ಸಾಲಿನಿಂದ ನೀಡಲಾಗುವುದು ಎಂದು ತಿಳಿಸಿದ್ದಾರೆ.
ಇದನ್ನು ಓದಿ: ವಿದ್ಯಾರ್ಥಿಗಳಿಗಾಗಿ ಬಂತು ಹೊಸ ಸ್ಕಾಲರ್ಶಿಪ್: ಇದ್ರಲ್ಲಿ ಸಿಗುತ್ತೆ ಬರೋಬ್ಬರಿ ₹1,20,000
ದೈಹಿಕ ಮತ್ತು ಮಾನಸಿಕವಾಗಿ ನ್ಯೂನ್ಯತೆಯಿಂದ ಬಳಲುವ ಮಕ್ಕಳನ್ನು ತಾತ್ಸಾರವನ್ನು ದೃಷ್ಟಿಯಿಂದ ನೋಡದೆ, ಆ ನಿಷ್ಕಲ್ಮಶವಾದ ಜೀವಗಳಿಗೆ ಬೊಗಸೆಯಷ್ಟು ಪ್ರೀತಿಯನ್ನು ನೀಡಿ ನೋಡಿ, ಮರಳಿ ಬೆಟ್ಟದಷ್ಟು ಪ್ರೀತಿಯನ್ನು ತೋರುತ್ತಾರೆ. ಪ್ರತಿ ಒಂದು ಮಗುವೂ ಪ್ರತಿಭಾಶಾಲಿಯೇ, ಅವ್ರ ಪ್ರತಿಭೆಯನ್ನು ಗುರುತಿಸಿ ಬೆಂಬಲಿಸುವ ಕೆಲಸವನ್ನು ನಮ್ಮದಾಗಬೇಕು.
ವಿಶೇಷ ಚೇತನರನ್ನು ಸಮಾಜದ ಆಸ್ತಿಯಾಗಿ ಪರಿವರ್ತಿಸುವ ಹೊಣೆಯನ್ನು ಮಕ್ಕಳ ಪೋಷಕರ ಜೊತೆಗೆ ನಮ್ಮೆಲ್ಲರದ್ದು. ಈ ನಿಟ್ಟಿನಲ್ಲಿ ಎಲ್ಲರೂ ಒಟ್ಟಾಗಿ ಶ್ರಮಿಸೋಣ ಮತ್ತು ಮಕ್ಕಳ ಕನಸುಗಳಿಗೆ ನಾವು ಬಣ್ಣ ತುಂಬೋಣ ಎಂದು ಹೇಳಿದ್ದಾರೆ.
ಇತರೆ ವಿಷಯಗಳು:
ನಿರುದ್ಯೋಗಿಗಳಿಗೆ ಸಿಕ್ತು ಕೂಲ್ ಆಫರ್.!! ಈ ಯೋಜನೆಯಡಿ ತಿಂಗಳಿಗೆ ಉಚಿತ ₹5000