ಹಲೋ ಸ್ನೇಹಿತರೇ, ಕರ್ನಾಟಕದ ಸರ್ಕಾರಿ ನೌಕರರು ತುಟ್ಟಿಭತ್ಯೆಯನ್ನು ಏರಿಕೆ ಮಾಡಲಿದೆ ಎಂದು ಕಾದು ಕುಳಿತಿದ್ದರು. ಆದ್ರೆ ರಾಜ್ಯದ ಕಾಂಗ್ರೆಸ್ ಸರ್ಕಾರವು ಸರ್ಕಾರಿ ನೌಕರರಿಗೆ ಬಿಗ್ ಶಾಕ್ ಅನ್ನು ನೀಡಿದೆ. ಈ ಕುರಿತು ಸ್ವತಃ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯರವರು ಟ್ವೀಟ್‌ನ ಮೂಲಕ ಮಾಹಿತಿಯನ್ನು ನೀಡಿದ್ದಾರೆ.

ರಾಜ್ಯದಲ್ಲಿ BPL ಕಾರ್ಡ್ ರದ್ದು ವಿಚಾರದ ಕುರಿತು ಭಾರೀ ಚರ್ಚೆಯನ್ನು ನಡೆಯುತ್ತಿದೆ. ಇಂತಹ ಸಂದರ್ಭದಲ್ಲಿಯೇ ಸರ್ಕಾರಿ ನೌಕರರ BPL ಕಾರ್ಡ್ ಕುರಿತು ಸಿದ್ದರಾಮಯ್ಯರವರು ಟ್ವೀಟ್ ಅನ್ನು ಮಾಡಿದ್ದಾರೆ. ಕೆಲವು ಬಿಪಿಎಲ್ ಫಲಾನುಭವಿಗಳ ಕಾರ್ಡ್‌ಗಳನ್ನು ರದ್ದುಗೊಳಿಸಿ APL ಕಾರ್ಡ್ ಆಗಿ ಪರಿವರ್ತನೆ ಮಾಡಲಾಗುತ್ತಿದೆ.
ಭಾನುವಾರ ಬಾಲಕೋಟೆಯಲ್ಲಿ ಮಾತನಾಡಿದ್ದ ಸಿದ್ದರಾಮಯ್ಯ, “ಅನರ್ಹರ ಬಿಪಿಎಲ್ ಕಾರ್ಡ್‌ಗಳನ್ನು ಮಾತ್ರ ವಾಪಾಸ್ ಪಡೆಯಬಹುದು. ಅರ್ಹರ ಕಾರ್ಡ್‌ಗಳಿಗೆ ಯಾವುದೇ ತೊಂದರೆ ಇಲ್ಲ” ಎಂದು ಸ್ಪಷ್ಟಪಡಿಸಿದ್ದರು.
“ಸರ್ಕಾರಿ ನೌಕರರು ಮತ್ತು ಆದಾಯವನ್ನು ತೆರಿಗೆ ಪಾವತಿದಾರರನ್ನು ಹೊರತುಪಡಿಸಿದಂತೆಯೇ ಉಳಿದ ಯಾವುದೇ ಕುಟುಂಬದವರ ಪಡಿತರ ಚೀಟಿಯನ್ನು ರದ್ದಾಗಿದ್ದರೆ ತಕ್ಷಣವೇ ವಾಪಸ್ ನೀಡಬೇಕು. ಬಡ ಕುಟುಂಬದವರ ಪಡಿತರ ಚೀಟಿಗಳನ್ನು ವಿನಾಕಾರಣ ರದ್ದು ಮಾಡಿದ್ರೆ ಆಹಾರ ಇಲಾಖೆ ಅಧಿಕಾರಿಗಳ ವಿರುದ್ಧ ಕ್ರಮವನ್ನು ಜರುಗಿಸಲಾಗುವುದು” ಎಂದು ಮುಖ್ಯಮಂತ್ರಿಗಳು ಈಗಾಗಲೇ ತಿಳಿಸಿದ್ದಾರೆ.
ಬಿಪಿಎಲ್ ಕಾರ್ಡ್ ಫಲಾನುಭವಿಗಳ ವಿಚಾರವಾಗಿ ಬಂದಾಗ ಸರ್ಕಾರಿ ನೌಕರರು BPL ಕಾರ್ಡ್ ಹೊಂದಿದ್ದಾರೆ ಎನ್ನುವ ಬಗ್ಗೆ ಚರ್ಚೆಗಳು ನಡೆಯುತ್ತಿತ್ತು. ಇದೀಗ ಫಲಾನುಭವಿಗಳ ಪರಿಶೀಲನೆಯದ ವೇಳೆ ಸರ್ಕಾರಿ ನೌಕರರ ಬಿಪಿಎಲ್ ಕಾರ್ಡ್ ರದ್ದು ಮಾಡಲಾಗುತ್ತಿದೆ.
ಇದನ್ನೂ ಓದಿ: ಸಿಎಂನಿಂದ ಬಂತು ಖಡಕ್ ವಾರ್ನಿಂಗ್!! 20 ಲಕ್ಷಕ್ಕೂ ಅಧಿಕ ರೇಷನ್ ಕಾರ್ಡ್ ರದ್ದು
ರಾಜ್ಯದಲ್ಲಿ ಬಿಪಿಎಲ್ ಕಾರ್ಡ್ ರದ್ದು ವಿಚಾರ ಬಹಳ ಗೊಂದಲಕ್ಕೆ ಕಾರಣವಾಗಿದೆ. ಆದ್ದರಿಂದಲೇ ಗುರುವಾರದಂದು ವಿಧಾನಸೌಧದಲ್ಲಿ ಆಹಾರ ಹಾಗೂ ನಾಗರಿಕ ಸರಬರಾಜು ಖಾತೆಯನ್ನು ಸಚಿವ ಕೆ. ಎಚ್. ಮುನಿಯಪ್ಪ ಪತ್ರಿಕಾಗೋಷ್ಠಿಯನ್ನು ಕರೆದಿದ್ದು, ಈ ಕುರಿತು ಮಾಹಿತಿಯನ್ನು ನೀಡಲಿದ್ದಾರೆ.
ಅನರ್ಹ BPL ಕಾರ್ಡ್ ರದ್ದು ವಿಚಾರ ಹಾಗೂ ಬಿಪಿಎಲ್ ಕಾರ್ಡ್ ಹಂಚಿಕೆ ಮಾನದಂಡ, ಎಪಿಎಲ್ ಕಾರ್ಡ್ ರದ್ದಾಗುವ ಆತಂಕವಾದ ಮುಂತಾದ ವಿಚಾರಗಳ ಕುರಿತು ಸಚಿವರು ಸ್ಪಷ್ಟನೆಯನ್ನು ನೀಡುವ ನಿರೀಕ್ಷೆ ಇದೆ.
ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯು ರಾಜ್ಯದಲ್ಲಿ ರೇಷನ್ ಕಾರ್ಡ್ ಪರಿಷ್ಕರಣೆಗೆ ಸಿದ್ಧತೆಯನ್ನು ನಡೆಸುತ್ತಿದೆ. ಸದ್ಯದ ಮಾಹಿತಿಯ ಪ್ರಕಾರವಾಗಿ 13,87,652 ರೇಷನ್ ಕಾರ್ಡ್ ಅನ್ನು ಪರಿಷ್ಕರಣೆಯನ್ನು ಮಾಡಲಾಗುತ್ತದೆ. ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಸಹ ವರದಿಯನ್ನು ಸಲ್ಲಿಕೆಯನ್ನು ಮಾಡಲಾಗಿದೆ. ಇಲ್ಲಿಯವರೆಗೆ 3,81,983 ರೇಷನ್ ಕಾರ್ಡ್‌ಗಳನ್ನು ರದ್ದು/ ಅಮಾನತು ಮಾಡಲಾಗಿದ್ದು 10,05,669 ರೇಷನ್ ಕಾರ್ಡ್ ಅನ್ನು ಪರಿಷ್ಕರಣೆ ಮಾಡಬೇಕಿದೆ ವರದಿಯಲ್ಲಿ ತಿಳಿಸಿದೆ.