ಗ್ರಾಮೀಣ ಮಹಿಳೆಯರಿಗೆ ಗುಡ್‌ ನ್ಯೂಸ್.!! 3 ವರ್ಷದ ತರಬೇತಿ, 7,000 ರೂ ಸ್ಟೈಪೆಂಡ್

ಹಲೋ ಸ್ನೇಹಿತರೇ, ಭಾರತೀಯ ಜೀವ ವಿಮಾ ನಿಗಮದಿಂದ ಬಿಮಾ ಸಖಿ ಯೋಜನೆ ಆರಂಭವಾಗಿದೆ. ಮಹಿಳೆಯರು ಎಲ್​ಐಸಿ ಏಜೆಂಟ್​ಗಳಾಗಲು ಅವಕಾಶ ಸಿಕ್ಕಿದೆ. ಗ್ರಾಮೀಣದಲ್ಲಿನ ಭಾಗದಲ್ಲಿ ಇನ್ಷೂರೆನ್ಸ್ ಹೆಚ್ಚು ತಲುಪಿಲ್ಲವಾದ್ದರಿಂದ ಗ್ರಾಮೀಣ ಭಾಗದ ಮಹಿಳೆಯರಿಗೆ ಆದ್ಯತೆಯನ್ನು ಇದೆ. ಬಿಮಾ ಸಖಿಯಾಗಬಯಸುವ ಮಹಿಳೆಯರು ಮೂರು ವರ್ಷ ತರಬೇತಿ ಪಡೆಯಬೇಕು.

LIC Bima Sakhi scheme
LIC Bima Sakhi scheme

ಹರ್ಯಾಣದ ಪಾಣಿಪತ್​ನಲ್ಲಿ ಪ್ರಧಾನಿ ನರೇಂದ್ರ ಮೋದಿ ಯವರು LIC ಬಿಮಾ ಸಖಿ ಯೋಜನೆಗೆ ಚಾಲನೆಯನ್ನು ನೀಡಿದ್ದಾರೆ. 10ನೇ ತರಗತಿ ಓದಿದ ಕನಿಷ್ಠ ವಿದ್ಯಾರ್ಹತೆಯು ಇರುವ 18 ವರ್ಷದಿಂದ 70 ವರ್ಷ ವಯೋಮಾನದ ಎಲ್ಲಾ ಮಹಿಳೆಯರಿಗೂ ವಿಮಾ ಸಖಿಯರಾಗಲು (ಇನ್ಷೂರೆನ್ಸ್ ಏಜೆಂಟ್) ಅವಕಾಶ ಸಿಗುತ್ತದೆ. ಗ್ರಾಮೀಣ ಭಾಗದ ಮಹಿಳೆಯರಿಗೆ ಹೆಚ್ಚು ಆದ್ಯತೆ ಇರುತ್ತದೆ.

ಗ್ರಾಮೀಣ ಭಾಗದಲ್ಲಿ ಇನ್ಷೂರೆನ್ಸ್ ಹೆಚ್ಚು ಜನರನ್ನು ತಲುಪಿಲ್ಲ. ಈ ಕಾರಣಕ್ಕೆ ಈ ಭಾಗದ ಮಹಿಳೆಯರಿಗೆ ವಿಮಾ ತರಬೇತಿಯನ್ನು ನೀಡಿ ಅವರನ್ನು LIC ಏಜೆಂಟ್​ಗಳಾಗಿ ಮಾಡಿ, ಆ ಮೂಲಕವಾಗಿ ಹೆಚ್ಚು ಜನರಿಗೆ ವಿಮಾ ಸೌಲಭ್ಯ ತಲುಪಿಸುವ ಗುರಿ ಸರ್ಕಾರದ್ದಾಗಿದೆ. ಈ ಯೋಜನೆಯಲ್ಲಿ ಮಹಿಳೆಯರಿಗೆ ವಿಮಾ ಯೋಜನೆಗಳ ಬಗ್ಗೆ ತರಬೇತಿಯನ್ನು ನೀಡಲಾಗುತ್ತದೆ. ಆ ಬಳಿಕ ಅವರನ್ನು ಎಲ್​ಐಸಿ ಏಜೆಂಟ್​ಗಳನ್ನಾಗಿ ಮಾಡಲಾಗುತ್ತದೆ.

ಇದನ್ನೂ ಓದಿ: ರೈತರಿಗೆ ಇನ್ಮುಂದೆ ಭರ್ಜರಿ ಸಬ್ಸಿಡಿ ಭಾಗ್ಯ.!! ಈ ಯೋಜನೆಗೆ ಸಿಗಲಿದೆ ಶೇ.90ರಷ್ಟು ಸಹಾಯಧನ

ಬಿಮಾ ಸಖಿ ಯೋಜನೆ ಅಡಿ ತರಬೇತಿಗೆ ಅರ್ಜಿ ಸಲ್ಲಿಸುವುದು ಹೇಗೆ?

ಈ ಯೋಜನೆಯ ಲಿಂಕ್ ಇಲ್ಲಿದೆ: licindia.in/lic-s-bima-sakhi

7,000 ರೂ ಮಾಸಿಕ ಸ್ಟೈಪೆಂಡ್…

ತರಬೇತಿ ಅವಧಿ ಮೂರು ವರ್ಷ ಇರುತ್ತದೆ. ಮೊದಲ ವರ್ಷದಂದು ತಿಂಗಳಿಗೆ 7,000 ರೂ ಸ್ಟೈಪೆಂಡ್ ನೀಡಲಾಗುತ್ತದೆ. ಎರಡನೇ ವರ್ಷದಲ್ಲಿ 6,000 ರೂ ಸ್ಟೈಪೆಂಡ್ ನೀಡಲಾಗುತ್ತದೆ. ಮೂರನೇ ವರ್ಷದಲ್ಲಿ 5,000 ರೂ ಮಾಸಿಕ ಸ್ಟೈಪೆಂಡ್ ನಿಡಲಾಗುತ್ತದೆ.

ಇಲ್ಲಿ ಮೊದಲ ವರ್ಷದಲ್ಲಿ ಹೇಳಿಕೊಡಲಾಗುವ ಪಾಲಿಸಿಗಳಲ್ಲಿ ಶೇ. 65ಕ್ಕೂ ಹೆಚ್ಚಿನ ಭಾಗವನ್ನು ಅಭ್ಯರ್ಥಿಗಳು ಕಲಿತಿದ್ದರೆ ಎರಡನೇ ವರ್ಷದಲ್ಲಿ ಸ್ಟೈಪೆಂಡ್ ಸಿಗುತ್ತದೆ.

ಇತರೆ ವಿಷಯಗಳು:

ಮಹಿಳಾ ಸರ್ಕಾರಿ ನೌಕರರಿಗೆ ಹೊಸ ರಜೆ ನೀತಿ ಜಾರಿ!

ರಾಜ್ಯದ ಜನತೆಗೆ ಮತ್ತೊಂದು ಶಾಕ್.!! ‘ಕಾವೇರಿ’ ನೀರಿನ ದರ ಏರಿಕೆ

Leave a Comment

rtgh