ಹಲೋ ಸ್ನೇಹಿತರೇ, ಪ್ರತಿಬಾರಿ ಸೋತವರಿಗೆ ಮಾತ್ರ ಗೆಲುವಿನ ಮಹತ್ವ ಗೊತ್ತಿರುತ್ತೆ. ಆದ್ರೆ ಆ ಗೆಲುವನ್ನ ತನ್ನದಾಗಿಸಿಕೊಳ್ಳುವುದು ಹೇಗೆ ಅಂತ ಮಾತ್ರವೇ ಗೊತ್ತಿರೋದಿಲ್ಲ. ಈಗ ಅಂಥದ್ದೇ ಸ್ಥಿತಿಯಲ್ಲಿದ್ದಾರೆ ನಿಖಿಲ್ ಕುಮಾರ್ ಸ್ವಾಮಿ. ಎಸ್, ಮತ್ತೊಮ್ಮೆ ಹೀನಾಯ ಸೋಲು ಕಂಡಿದ್ದಾರೆ ನಿಖಿಲ್ ಕುಮಾರಸ್ವಾಮಿ. ಮಂಡ್ಯ ರಣಕಣದಲ್ಲಿ ಮೊದಲನೇ ಬಾರಿ ಸೋತ್ತಿದ್ದ ನಿಖಿಲ್, ಎರಡನೇಯ ಬಾರಿ ರಾಮನಗರ ಅಖಾಡಕ್ಕೆ ಧುಮುಕಿದ್ದರು. ಅಲ್ಲಿಯೂ ಅವರಿಗೂ ನಿರಾಸೆ ಉಂಟಾಗಿತ್ತು. ಹೀನಾಯ ಸೋಲು ಕಂಡಿದ್ದರು. ಇದಾದ ಬಳಿಕ ಸಾಮಾನ್ಯ ಕಾರ್ಯಕರ್ತನಂತೆ ಇರುತ್ತೇನೆ ಅಂತ ಹೇಳಿದ್ದರು. ಆದರೆ ಬೈ ಎಲೆಕ್ಷನ್ ಡೇಟ್ ಅನೌನ್ಸ್ ಆಗಿದ್ದೇ ತಡ ಚನ್ನಪಟ್ಟಣ ಅಖಾಡಕ್ಕೆ ಅಗ್ನಿಪರೀಕ್ಷೆಗೆ ಇಳಿದಿದ್ರು.

ಸೈನಿಕನ ವಿರುದ್ಧ ತೊಡೆ ತಟ್ಟಿದ್ದ ಯುವರಾಜ ಮತ್ತೊಮ್ಮೆ ಸೋಲುಂಡಿದ್ದಾರೆ. ಮೂರು ಬಾರಿಯೂ ನಿಖಿಲ್ ಕುಮಾರಸ್ವಾಮಿ ಸೋಲೋದಕ್ಕೆ ಇದೇ ಕಾರಣ. ಏನು ಅಂತೀರಾ ಮುಂದೆ ನೋಡಿ..
ನಿಖಿಲ್ ಕುಮಾರ್ ಸ್ವಾಮಿ ಸೋಲಿಗೆ ಇದೇ ಕಾರಣ!
ನಿಖಿಲ್ ಕುಮಾರ್ ಸ್ವಾಮಿ ಮೂರು ಬಾರಿಯೂ ಸೋತಿದ್ದಾರೆ. ಸೋಲಿನ ಸರದಾರ ಎನಿಸಿಕೊಂಡಿದ್ದಾರೆ. ಇದಕ್ಕೆ ಪ್ರಮುಖವಾದ ಕಾರಣ ಎಂದರೆ JDS ಪಕ್ಷದ ಆತುರದ ನಿರ್ಧಾರ ಅಂದ್ರೆ ತಪ್ಪಾಗಲ್ಲ. ಇಲ್ಲ ಕುಮಾರಸ್ವಾಮಿಯವರ ಆತುರದ ನಿರ್ಧಾರವಾ ಅನ್ನೋ ಪ್ರಶ್ನೆ ಮೂಡುತ್ತೆ. ಯಾವುದೇ ಯೋಚನೆ ಮಾಡದೇ ಮಗನನ್ನು ಪದೇ ಪದೇ ಕಣಕ್ಕೆ ಇಳಿಸುತ್ತಿರುವುದೇ ಸೋಲಿಗೆ ಪ್ರಮುಖ ಕಾರಣ ಅಂತ ಜನ ಮಾತನಾಡಿಕೊಳ್ಳುತ್ತಿದ್ದಾರೆ.
ಗ್ರೌಂಡ್ ವರ್ಕ್ ಮಿಸ್ ಆಗ್ತಿದ್ಯಾ?
ಎದುರಾಳಿಗಳು ಏನನ್ನು ಯೋಚನೆ ಮಾಡುತ್ತಿದ್ದಾರೆ ಅನ್ನೋದನ್ನು ಊಹಿಸಿಕೊಳ್ಳದೇ ಕುಟುಂಬದ ಪ್ರತಿಷ್ಠೆಗಾಗಿ ನಿಖಿಲ್ ಕುಮಾರಸ್ವಾಮಿಯನ್ನು ಬಲಿಪಶುವಾಗಿ ಮಾಡಲಾಯ್ತಾ? ಅನ್ನೋ ಪ್ರಶ್ನೆ ಸಹ ಇಲ್ಲಿ ಬರುತ್ತೆ. ಟ್ರೆಂಡ್ ಅರಿಯದೆ ಕುಮಾರಸ್ವಾಮಿಯವರು ಮಗನ ಎಳೆದು ತಂದು ನಿಲ್ಲಿಸಿದ್ದೇ ಸೋಲಿಗೆ ಪ್ರಮುಖ ಕಾರಣ ಅಂತಿದ್ದಾರೆ ರಾಜ್ಯದ ಜನ.
ಇದನ್ನು ಓದಿ: 2025ರಲ್ಲಿ ಎಷ್ಟು ಸಾರ್ವತ್ರಿಕ ರಜೆ? ಇಲ್ಲಿದೆ ಕಂಪ್ಲೀಟ್ ಅಪ್ಡೇಟ್
ನಿಖಿಲ್ ಬಿಟ್ಟು ಬೇರೆ ಆಯ್ಕೆ ಇಲ್ವಾ?
ಪ್ರತಿಬಾರಿಯೂ ನಿಖಿಲ್ ಕುಮಾರಸ್ವಾಮಿಯವರನ್ನೇ ಅಖಾಡಕ್ಕೆ ಇಳಿಸೋದ್ಯಾಕೆ ದಳಪತಿ? 2 ಬಾರಿ ಸೋತಿದ್ರೂ ಮತ್ತೆ ಮಗನಿಗೆ ಮಣೆ ಹಾಕಿದ್ಯಾಕೆ? ಮಗನನ್ನು ಗೆಲ್ಲುವಂತೆ ಮಾಡುವುದೇ ಕುಮಾರಸ್ವಾಮಿಯವರ ಮಹತ್ತರ ಉದ್ದೇಶ ಅನ್ನೋದು ಇದರಿಂದಲೇ ಗೊತ್ತಾಗುತ್ತೆ. ಮಾಜಿ ಪಿಎಂ ದೇವೇಗೌಡರಿಗೂ ಮೊಮ್ಮಗನ ಭವಿಷ್ಯದ ಬಗ್ಗೆ ಸಿಕ್ಕಾಪಟ್ಟೆ ಟೆನ್ಶನ್ ಇದೆ.
ಮೊಮ್ಮಗನ ಭವಿಷ್ಯದ್ದೇ ಚಿಂತೆ!
ಯೆಸ್, ಮಾಜಿ ಪ್ರಧಾನಿ ದೇವೇಗೌಡರು ಕೂಡ ನಿರ್ಧಾರ ತೆಗೆದುಕೊಳ್ಳುವುದರಲ್ಲಿ ಎಡವಿದ್ರಾ? ಮೊಮ್ಮಗನ ಭವಿಷ್ಯದ ಬಗ್ಗೆಯು ಹೆಚ್ಚು ಯೋಚಿಸಿಯೇ ಈ ಆತುರದ ನಿರ್ಧಾರವನ್ನು ತೆಗೆದುಕೊಂಡ್ರು ಅಂದ್ರೆ ತಪ್ಪಾಗಲ್ಲ. ಮೊಮ್ಮಗ ಗೆಲ್ಲೋದನ್ನು ನೋಡಬೇಕು ಅನ್ನೋದೇ ದೇವೇಗೌಡರ ಆಸೆ ಇರಬಹುದು. ಈ ಒಂದು ಆಸೆಯೇ ನಿಖಿಲ್ ಕುಮಾರಸ್ವಾಮಿಗೆ ಮುಳುವಾಯ್ತು ಅನ್ನಬಹುದು.
ಇದೀಗ ನಿಖಿಲ್‌ಗೆ ಮತ್ತೊಮ್ಮೆ ಹೀನಾಯ ಸೋಲಾಗಿದೆ. ಇಷ್ಟೆಲ್ಲಾ ಮಾಡಿದ್ದು ನಿಖಿಲ್ ಭವಿಷ್ಯಕ್ಕಾಗಿ ಅಲ್ವಾ? ಮುಂದೆ ನಿಖಿಲ್ ಭವಿಷ್ಯವೇನು? ಮೂರನೇ ಸೋಲಿನಿಂದ ನಿಖಿಲ್ ಹೇಗೆ ಆಚೆ ಬರ್ತಾರೆ? ಮತ್ತೆ ರಾಜಕೀಯದಲ್ಲೇ ಸಕ್ರಿಯರಾಗ್ತಾರಾ? ಇಲ್ಲ ಮತ್ತೆ ಚಿತ್ರರಂಗದತ್ತ ಮರಳುತ್ತಾರಾ? ಇದಕ್ಕೆ ಉತ್ತರ ಸ್ವತಃ ನಿಖಿಲ್ ಕುಮಾರಸ್ವಾಮಿನೇ ಹೇಳಬೇಕಿದೆ.
ಇತರೆ ವಿಷಯಗಳು:
ಸಿಎಂನಿಂದ ಬಂತು ಖಡಕ್ ವಾರ್ನಿಂಗ್!! 20 ಲಕ್ಷಕ್ಕೂ ಅಧಿಕ ರೇಷನ್ ಕಾರ್ಡ್ ರದ್ದು
ಪಿಎಂ ಕಿಸಾನ್ ಯೋಜನೆಯಡಿ ಭರ್ಜರಿ ಸಬ್ಸಡಿ! ಟ್ರ್ಯಾಕ್ಟರ್‌ಗಾಗಿ ಇಂದೇ ಅರ್ಜಿ ಸಲ್ಲಿಸಿ