ಹಲೋ ಸ್ನೇಹಿತರೆ, ಫೆಂಗಲ್ ಚಂಡಮಾರುತದ ಪರಿಣಾಮ ಸುರಿದ ಮಳೆಯಿಂದಾಗಿ ಜನರು ದಿನನಿತ್ಯ ಬಳಸುವ ತರಕಾರಿಗಳ ಬೆಲೆ ಏಕಾಏಕಿ ಏರಿಕೆಯಾಗಿದೆ. ಮೊನ್ನೆಯಷ್ಟೇ ಟೊಮೆಟೊ, ಕೊತ್ತಂಬರಿ ಸೊಪ್ಪು ಬೆಲೆ ಏರಿಕೆಯಾಗಿತ್ತು. ಈಗ ಈರುಳ್ಳಿ, ಬೆಳ್ಳುಳ್ಳಿಗೂ ಏರಿಕೆಯಾಗಿದೆ.

ಇದರೊಂದಿಗೆ ಜನರು ದಿನನಿತ್ಯ ಬಳಸುವ ಎಲ್ಲಾ ತರಕಾರಿಗಳೂ ದುಬಾರಿಯಂತಾಗಿದೆ. ಈರುಳ್ಳಿ ಬೆಲೆ ಕೆಲವು ದಿನಗಳ ಹಿಂದಷ್ಟೇ ಒಮ್ಮೆ ಏರಿಕೆಯಾಗಿತ್ತು. ಆದರೆ ಬಳಿಕ ಇಳಿಕೆಯಾಗಿತ್ತು. ಆದ್ರೆ ಈಗ ಮಳೆಯಾದ ಬಳಿಕ ಮತ್ತೆ ಈರುಳ್ಳಿ ಭಾರೀ ದುಬಾರಿಯಾಗಿದೆ. ಈ ಹೀಗೆ 40 ರಿಂದ 50 ರೂ.ಗೆ ಉತ್ತಮ ಗುಣಮಟ್ಟದ ಈರುಳ್ಳಿಯ ಮಾರಾಟವಾಗುತ್ತಿತ್ತು.
ಆದರೆ ಈಗ 70 ರಿಂದ 80 ರೂ.ಗೆ ತಲುಪಿದೆ. ಸಾಮಾನ್ಯ ಗುಣಮಟ್ಟದ ಈರುಳ್ಳಿಗೆ 60 ರೂ.ವರೆಗೆ ಬೆಲೆಯಾಗಿದೆ. ಬೆಳ್ಳುಳ್ಳಿಯೂ ಕಡಿಮೆಯೇನಲ್ಲ.
ಇದನ್ನೂ ಓದಿ: ರೈತರಿಗೆ ಕೇಂದ್ರದಿಂದ ಸಿಹಿ ಸುದ್ದಿ.!! ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆ ಘೋಷಣೆ
ರೀಟೇಲ್ ನಲ್ಲಿ ಬೆಳ್ಳುಳ್ಳಿ ಬೆಲೆ 500 ರೂ. ದಾಟಿದೆ. ಅಕಾಲಿಕವಾಗಿ ಮಳೆ, ಹೊರರಾಜ್ಯದಿಂದ ಆಮದು ಕೊರತೆಯಾಗಿರುವುದೇ ಈ ಬೆಲೆಯು ಏರಿಕೆಗೆ ಕಾರಣ ಎಂದು ತಿಳಿದುಬಂದಿದೆ.
ರಾಜ್ಯದಲ್ಲಿ ಮತ್ತು ನೆರೆ ರಾಜ್ಯಗಳಲ್ಲಿ ಅಕಾಲಿಕ ಮಳೆಯಾಗಿತ್ತು. ಪರಿಸ್ಥಿತಿಯು ಇದೇ ರೀತಿಯಲ್ಲಿ ಮುಂದುವರಿದ್ರೆ ಮುಂದಿನ ಕೆಲವೇ ದಿನಗಳಲ್ಲಿ ಈರುಳ್ಳಿ ಬೆಲೆಯು ಮತ್ತೊಮ್ಮೆ ಶತಕವನ್ನು ದಾಟುವ ಸಾಧ್ಯತೆಯಿದೆ. ಬೆಲೆ ಏರಿಕೆಯ ಸುಧಾರಿಸಬೇಕಾದ್ರೆ ಜನವರಿವರೆಗೂ ಕಾಯಬೇಕಾದಂತಹ ಪರಿಸ್ಥಿತಿಯಿದೆ.
ಇತರೆ ವಿಷಯಗಳು:
ಪಿಎಂ ಕಿಸಾನ್ ಯೋಜನೆಯಲ್ಲಿ ಹೊಸ ರೂಲ್ಸ್.! ಈ ಕೆಲಸ ಮಾಡದಿದ್ರೆ ನಿಮಗಿಲ್ಲ 19ನೇ ಕಂತಿನ ಹಣ