ಹಲೋ ಸ್ನೇಹಿತರೇ, ಕೇಂದ್ರ ಸರ್ಕಾರವು ಪಿಎಂ ಪೋಷಣ್ (ಮಧ್ಯಾಹ್ನದ ಬಿಸಿಯೂಟ) ಯೋಜನೆಗೆ ಬಳಸುವ ‘ವಸ್ತುಗಳ ಖರೀದಿ ವೆಚ್ಚ’ ಹೆಚ್ಚಿಸಿದ್ದು, ಈ ಮೂಲಕ ಕೇಂದ್ರೀಯ ಪ್ರಾಯೋಜಿತ ಯೋಜನೆಯ ಅನುದಾನ ಏರಿಸಿದೆ. ಊಟ ತಯಾರಿಸಲು ಮುಖ್ಯವಾಗಿ ಬೇಕಾಗುವ ಬೇಳೆ, ತರಕಾರಿ, ಎಣ್ಣೆ ಹಾಗೂ ಇತರ ಪದಾರ್ಥಗಳು, ಇಂಧನ ಖರೀದಿಗೆ ಈ ಹಿಂದೆ ನಿಗದಿಪಡಿಸಿದ್ದ ದರಗಳನ್ನು ಹೆಚ್ಚಿಸಿದೆ.

ಯಾರಿಗೆ, ಎಷ್ಟು ಹೆಚ್ಚು?
ಅಂಗನವಾಡಿ ಮತ್ತು ಪ್ರಾಥಮಿಕ ಶಾಲಾ ಮಕ್ಕಳಿಗೆ ನೀಡಲಾಗುವ ಆಹಾರದ ತಯಾರಿಕೆಯ ವಸ್ತುಗಳ ವೆಚ್ಚ 5.45 ರಿಂದ 6.19 ರೂ.ಗಳಿಗೆ ಹೆಚ್ಚಿಸಲಾಗಿದೆ. ಹಿರಿಯ ಪ್ರಾಥಮಿಕ ಶಾಲಾ ಹಂತಕ್ಕೆ 8.17ರಿಂದ 9.29ರೂ.ಗೆ ಏರಿಸಲಾಗಿದೆ. ಈ ಬೆಲೆ ಏರಿಕೆ ಡಿ.1ರಿಂದ ಅನ್ವಯಿಸುವಂತೆ ಜಾರಿಯನ್ನು ಮಾಡಲಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಈ ಬೆಲೆ ಎಲ್ಲ ರಾಜ್ಯ, ಕೇಂದ್ರಾಡಳಿತ ಪ್ರದೇಶಗಳಿಗೆ ಅನ್ವಯಿಸಲಿದೆ. ಆದ್ರೆ ರಾಜ್ಯಗಳು ಇದ್ರ ಹೊರತಾಗಿಯೂ ಹೆಚ್ಚುವರಿ ಮೊತ್ತವನ್ನು ಭರಿಸಲು ಅವಕಾಶವಿದೆ. ಮಕ್ಕಳಿಗೆ ಪೌಷ್ಟಿಕಾಂಶ ಭರಿತವಾದ ಊಟವನ್ನು ನೀಡಲು ಈಗಾಗಲೇ ಹಲವು ರಾಜ್ಯಗಳು ಇಂಥ ಕ್ರಮಗಳನ್ನು ಕೈಗೊಂಡಿವೆ.
ಬೆಲೆ ನಿಗದಿ ಹೇಗೆ?
ಊಟ ತಯಾರಿಸಲು ಬೇಕಾಗುವ ವಸ್ತುಗಳ ಬೆಲೆ ಗ್ರಾಹಕ ಬೆಲೆ ಸೂಚ್ಯಂಕ ಆಧರಿಸಿ ನಿಗದಿ ಮಾಡಲಾಗುತ್ತದೆ. ಇದಕ್ಕಾಗಿಯೇ ದೇಶದ 20 ರಾಜ್ಯಗಳ 600ಕ್ಕೂ ಅಧಿಕ ಹಳ್ಳಿಗಳಲ್ಲಿ ಈ ವಸ್ತುಗಳಿಗಿರುವ ದರ ಸಮೀಕ್ಷೆಯನ್ನು ಮಾಡಿ ಕಾರ್ವಿುಕರ ಇಲಾಖೆ ನೀಡಿರುವ ಗ್ರಾಹಕ ಬೆಲೆ ಸೂಚ್ಯಂಕದನ್ವಯ ದರಪಟ್ಟಿಯನ್ನು ಸಿದ್ಧಪಡಿಸಲಾಗಿದೆ. 2023-24ರಿಂದ ಈ ಬೆಲೆ ಏರಿಕೆ ಮಾಡಿರಲಿಲ್ಲ. ಅಂತೆಯೇ, 2022- 23ನೇ ಸಾಲಿಗೆ ಹಣದುಬ್ಬರವು 6.45 ಆಗಿತ್ತು. ಮತ್ತು 2023-24ನೇ ಸಾಲಿಗೆ 6.74 ಆಗಿದೆ. ಸರಿದೂಗಿಸಲು ಕೇಂದ್ರ ಸರ್ಕಾರವು ಈಗಾಗಲೇ 425.62 ಕೋಟಿ ರೂ.ಗಳ ಹೆಚ್ಚುವರಿ ಹೊರೆಯನ್ನು ಭರಿಸಲಿದೆ.
ಇದನ್ನೂ ಓದಿ: ರೈತರಿಗೆ ಕೇಂದ್ರದಿಂದ ಸಿಹಿ ಸುದ್ದಿ.!! ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆ ಘೋಷಣೆ
ಆಹಾರ ಧಾನ್ಯಗಳ ಪೂರೈಕೆ:
ಊಟ ತಯಾರಿಕೆಗೆ ಬೇಕಾಗುವ ವೆಚ್ಚ ಭರಿಸುವ ಜತೆಗೆ, ಕೇಂದ್ರ ಸರ್ಕಾರ ಈ ಯೋಜನೆಗೆ 26 ಲಕ್ಷ ಮೆಟ್ರಿಕ್ ಟನ್ ಆಹಾರ ಧಾನ್ಯಗಳನ್ನು ಪೂರೈಸುತ್ತದೆ. ಇದರ ವೆಚ್ಚವೇ ಅಂದಾಜು 9,000 ಕೋಟಿ ರೂ. ಆಗಿದ್ದು, ಭಾರತೀಯ ಆಹಾರ ನಿಗಮದ ಗೋದಾಮಿನಿಂದ ಶಾಲೆವರೆಗೆ ಆಹಾರ ಧಾನ್ಯ ಸಾಗಿಸಲು ತಗಲುವ ವೆಚ್ಚ ಕೂಡ ಕೇಂದ್ರವೇ ಪಾವತಿಸುತ್ತದೆ. ಆಹಾರ ಧಾನ್ಯಗಳ ವೆಚ್ಚವನ್ನು ಸೇರಿ ಅಂಗನವಾಡಿ ಮತ್ತು ಪ್ರಾಥಮಿಕ ಶಾಲಾ ಮಕ್ಕಳ ಒಂದು ಹೊತ್ತಿನ ಊಟಕ್ಕೆ 11.54 ರೂಪಾಯಿಯನ್ನು ಮತ್ತು ಹಿರಿಯ ಪ್ರಾಥಮಿಕ ಶಾಲಾ ಮಕ್ಕಳ ಊಟಕ್ಕೆ 16.74 ರೂಪಾಯಿಯ ವೆಚ್ಚ ಮಾಡಿದಂತಾಗುತ್ತದೆ ಎಂದು ಕೇಂದ್ರ ಸರ್ಕಾರವು ತಿಳಿಸಿದೆ.
ರಾಜ್ಯದಲ್ಲಿ 10ನೇ ತರಗತಿಗೂ ವಿಸ್ತರಣೆ:
ಕೇಂದ್ರ ಸರ್ಕಾರವು 1ರಿಂದ 8ನೇ ತರಗತಿ ಮಕ್ಕಳಿಗೆ ಮಾತ್ರವಷ್ಡೇ ಈ ಯೋಜನೆಯನ್ನು ಜಾರಿಗೊಳಿಸಿದ್ದು, ರಾಜ್ಯ ಸರ್ಕಾರವು ಇದನ್ನು 10ನೇ ತರಗತಿಯ ಮಕ್ಕಳಿಗೂ ವಿಸ್ತರಿಸಿದೆ. ರಾಜ್ಯದಲ್ಲಿ 48,465 ಸರ್ಕಾರಿ ಶಾಲೆಗಳು ಹಾಗೂ 6,842 ಅನುದಾನಿತ ಸೇರಿ ಒಟ್ಟು 55,307 ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟದ ಯೋಜನೆಯನ್ನು ಜಾರಿಯಲ್ಲಿದೆ. ಒಟ್ಟು 55 ಲಕ್ಷಕ್ಕೂ ಅಧಿಕವಾದ ಮಕ್ಕಳು ಈ ಯೋಜನೆಯ ಫಲಾನುಭವಿಗಳಾಗಿದ್ದಾರೆ.
ಇತರೆ ವಿಷಯಗಳು:
ಅಪ್ಪನ ‘ಆಸ್ತಿ’ಯಲ್ಲಿ ಮಗಳಿಗೆ ಪಾಲಿದೆಯಾ.? ಯಾರಿಗೆ ಎಷ್ಟು ಪಾಲು.?
ರೈತರೇ ಇತ್ತ ಕಡೆ ಗಮನಕೊಡಿ.!! ಈ ಯೋಜನೆಯಡಿ ನಿಮ್ಮದಾಗಲಿದೆ 3 ಲಕ್ಷ ರೂಪಾಯಿ