ನಮಸ್ಕಾರ ಸ್ನೇಹಿತರೆ, ಕರ್ನಾಟಕ ರಾಜ್ಯ ಸರ್ಕಾರದಿಂದ ಬಿಪಿಎಲ್ (ಬಡತನ ರೇಖೆಗಿಂತ ಕೆಳಗಿರುವ) ರೇಷನ್ ಕಾರ್ಡ್ ಗೆ ಸಂಬಂಧಿಸಿದ ಪ್ರಮುಖ ಸೂಚನೆಗಳು ಹೊರಬಿದ್ದಿದ್ದು, ಇದರಿಂದ ಎಲ್ಲ ರೇಷನ್ ಕಾರ್ಡ್ ಜನರಲ್ಲಿ ಆತಂಕ ಉಂಟಾಗಿದೆ. ಈ ಬಗ್ಗೆ ಸರಿಯಾಗಿ ಮಾಹಿತಿ ತಿಳಿಯಲು ಈ ಲೇಖನವನ್ನು ಕೊನೆವರೆಗೆ ಓದಿ.

ಸರ್ಕಾರದ ತೀರ್ಮಾನ ಮತ್ತು ಪ್ರಮುಖ ಕಾರಣಗಳು:
ಸರ್ಕಾರ ಬಿಪಿಎಲ್ ಕಾರ್ಡ್ ಅಕ್ರಮವಾಗಿ ಬಳಸುತ್ತಿದ್ದವರ ವಿರುದ್ಧ ಕ್ರಮ ಕೈಗೊಳ್ಳಲು ಮುಂದಾಗಿದೆ. ಪಡಿತರ ಚೀಟಿಗೆ ಅರ್ಹತೆ ಇಲ್ಲದಿದ್ದರೂ ಅನೇಕ ಜನರು ಬಿಪಿಎಲ್ ಕಾರ್ಡ್ ಪಡೆದು ಸರ್ಕಾರದ ಯೋಜನೆಗಳನ್ನು ದುರುಪಯೋಗ ಮಾಡುತ್ತಿದ್ದಾರೆ. ಮುಖ್ಯವಾಗಿ, ಗೃಹಲಕ್ಷ್ಮಿ ಯೋಜನೆ ಮತ್ತು ಅನ್ನಭಾಗ್ಯ ಯೋಜನೆಗಳಂತಹ ಯೋಜನೆಗಳಿಂದ ಲಾಭ ಪಡೆಯುತ್ತಿದ್ದ ಅನರ್ಹ ಬಿಪಿಎಲ್ ಕಾರ್ಡ್‌ಗಳನ್ನು ರದ್ದುಗೊಳಿಸಲು ಸರ್ಕಾರ ನಿರ್ಧರಿಸಿದೆ.
ಯಾವ ಕಾರಣಕ್ಕೆ ರೇಷನ್ ಕಾರ್ಡ್ ರದ್ದುಗೊಳ್ಳಬಹುದು?
- ಬಿಪಿಎಲ್ ಕಾರ್ಡ್ ಕೇವಲ ಬಡತನ ರೇಖೆಗಿಂತ ಕೆಳಗಿರುವ ಜನರಿಗೆ ಮಾತ್ರ ಮೀಸಲಾಗಿದೆ.
- ಶ್ರೀಮಂತರು, ಹೈಸೋಸೈಟಿ ವ್ಯಕ್ತಿಗಳು ಮತ್ತು ಕೆಲವು ಸರ್ಕಾರಿ ನೌಕರರು ಬಿಪಿಎಲ್ ಕಾರ್ಡ್ ಹೊಂದಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
- ತೆರಿಗೆ ಪಾವತಿ ಮಾಡುವವರು ಹಾಗೂ ಸರ್ಕಾರಿ ಉದ್ಯೋಗದಲ್ಲಿರುವವರು ಬಿಪಿಎಲ್ ಕಾರ್ಡ್ ಪಡೆಯಲು ಅರ್ಹರಾಗಿರುವುದಿಲ್ಲ. ಈ ರೀತಿಯಲ್ಲಿರುವವರ ಕಾರ್ಡ್‌ಗಳನ್ನು ನಿಷೇಧಿಸಲಾಗುತ್ತದೆ.
ಆಹಾರ ಸಚಿವರ ಸ್ಪಷ್ಟನೆ:
ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್. ಮುನಿಸ್ವಾಮಿ ಅವರು ಈ ವಿಷಯದಲ್ಲಿ ಮಹತ್ವದ ವಿವರ ನೀಡಿದ್ದು, ಬಡತನ ರೇಖೆಗಿಂತ ಕೆಳಗಿರುವ ಜನರ ಬಿಪಿಎಲ್ ಕಾರ್ಡ್‌ಗಳನ್ನು ಯಾವುದೇ ಕಾರಣಕ್ಕೂ ರದ್ದು ಮಾಡಲಾಗುವುದಿಲ್ಲ ಎಂದು ಹೇಳಿದ್ದಾರೆ. ಆದರೆ, ನಿಷೇಧಿಸಲ್ಪಡುವ ಕಾರ್ಡ್‌ಗಳ ಪಟ್ಟಿಯನ್ನು ನಿರ್ದಿಷ್ಟ ಮಾನದಂಡಗಳ ಆಧಾರದ ಮೇಲೆ ತಯಾರಿಸಲಾಗಿದೆ.
ಬಿಪಿಎಲ್ ಅನರ್ಹ ಪಟ್ಟಿ ಬಿಡುಗಡೆ:
ಈಗಾಗಲೇ ಅನರ್ಹ ಬಿಪಿಎಲ್ ಕಾರ್ಡ್‌ಗಳ ಪಟ್ಟಿ ಹೊರಡಿಸಲಾಗಿದ್ದು, ಶೇಕಡಾ 80% ಕ್ಕೂ ಹೆಚ್ಚು ಕಾರ್ಡ್‌ಗಳನ್ನು ನಿಷೇಧಿಸಲಾಗಿದೆ. ದಕ್ಷಿಣ ಭಾರತದ ರಾಜ್ಯಗಳಲ್ಲಿ ಈ ಅನರ್ಹ ಪಟ್ಟಿ ಹೆಚ್ಚಾಗಿ ಕಂಡುಬಂದಿದೆ.
ನಿಮ್ಮ ಬಿಪಿಎಲ್ ಕಾರ್ಡ್ ರದ್ದುಗೊಳ್ಳಿದೆಯೇ ಎಂಬುದನ್ನು ಹೇಗೆ ತಿಳಿದುಕೊಳ್ಳಬಹುದು?
ನೀವು ನಿಮ್ಮ ಬಿಪಿಎಲ್ ಕಾರ್ಡ್ ಸ್ಥಿತಿಯನ್ನು ಆನ್ಲೈನಿನಲ್ಲಿ ಸುಲಭವಾಗಿ ಪರಿಶೀಲಿಸಬಹುದು:
- ಆಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ : https://ahara.kar.nic.in/WebForms/Cancelled_Result_List.aspx
(ಸರ್ಕಾರದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ವೆಬ್ಸೈಟ್). - ನಿಮ್ಮ ಜಿಲ್ಲೆ ಆಯ್ಕೆ ಮಾಡಿ.
- ನಿಮ್ಮ ತಾಲೂಕು ಆಯ್ಕೆ ಮಾಡಿ.
- ನಿಮ್ಮ ರೇಷನ್ ಕಾರ್ಡ್ ಸಂಖ್ಯೆ ನಮೂದಿಸಿ.
- ನಂತರ ನಿಮ್ಮ ಕಾರ್ಡ್ ಸ್ಥಿತಿ ಪರಿಶೀಲಿಸಿ.
ನಿಮ್ಮ ಕುಟುಂಬ ಮತ್ತು ಸ್ನೇಹಿತರಿಗೆ ಮಾಹಿತಿ ತಿಳಿಸಿ :
ಈ ಮಾಹಿತಿಯನ್ನು ನಿಮ್ಮ ಕುಟುಂಬ ಮತ್ತು ಸ್ನೇಹಿತರೊಂದಿಗೆತಿಳಿಸಿ .ಅವರ ಬಿಪಿಎಲ್ ಕಾರ್ಡ್‌ಗಳ ಸ್ಥಿತಿಯ ಬಗ್ಗೆ ಪರಿಶೀಲನೆ ಮಾಡಲು ಸಹಾಯ ಮಾಡಿ.