ಜ.1ರಿಂದ ಈ ನಿಯಮ ಫುಲ್ ಚೇಂಜ್.!! ರೀಚಾರ್ಚ್‌ ಬೆಲೆ ಮತ್ತೆ ಹೆಚ್ಚಳ

ಹಲೋ ಸ್ನೇಹಿತರೇ, ಭಾರತದಲ್ಲಿ ಮುಂದಿನ ವರ್ಷದಿಂದ ಟೆಲಿಕಾಂ ಕ್ಷೇತ್ರದಲ್ಲಿ ಮಹತ್ತರವಾದ ಬದಲಾವಣೆಯಾಗಲಿದ್ದು, ಪ್ರಮುಖವಾಗಿ ಟೆಲಿಕಾಂ ಕಂಪೆನಿಗಳ ಮೇಲೆಯು ಭಾರೀ ಪರಿಣಾಮವನ್ನು ಬೀರಲಿದೆ ಎನ್ನಲಾಗಿದೆ. ರಿಲಯನ್ಸ್ ಜಿಯೋ, ಭಾರ್ತಿ ಏರ್‌ಟೆಲ್ ಮತ್ತು ವೊಡಾಫೋನ್ ಐಡಿಯಾ (ವಿ) ಮತ್ತು BSNL ಸೇರಿದಂತೆ ಭಾರತದಲ್ಲಿನ ಎಲ್ಲಾ ಟೆಲಿಕಾಂ ಆಪರೇಟರ್‌ಗಳ ಮೇಲೆ ಪರಿಣಾಮವನ್ನು ಬೀರುವ ಟೆಲಿಕಾಂ ನಿಯಮಗಳಲ್ಲಿ ಭಾರೀ ಬದಲಾವಣೆಯು ಮುಂದಿನ ವರ್ಷದ ಜನವರಿ 1ರಿಂದ ಜಾರಿಗೆ ಬರಲಿದೆ.

Recharge price will increase
Recharge price will increase

ನಿಯಮ ಬದಲಾವಣೆಯ ನ್ಯೂ ರೈಟ್ ಆಫ್ ವೇ (RoW) ನಿಯಮಗಳು ಮತ್ತು ಇತ್ತೀಚೆಗೆ ದೂರಸಂಪರ್ಕ ಕಾಯಿದೆಯಡಿಯಲ್ಲಿ ತಿಳಿಸಲಾಗಿದೆ. ದೇಶದಾದ್ಯಂತ ಆಪ್ಟಿಕಲ್ ಫೈಬರ್ ಲೈನ್‌ಗಳು ಹಾಗೂ ಟೆಲಿಕಾಂ ಟವರ್‌ಗಳ ಸ್ಥಾಪನೆಯನ್ನು ಮುಂದಿನ ವರ್ಷದಿಂದ ಸರಳಗೊಳಿಸುವ ಗುರಿಯನ್ನು ಹೊಂದಲಾಗಿದೆ. ನಿಯಮಗಳ ಬದಲಾವಣೆ ಹಿನ್ನೆಲೆಯಲ್ಲಿ ಭಾರತೀಯ ಟೆಲಿಕಾಂ ಕಂಪೆನಿಗಳು ಸಹ ತಮ್ಮ ತಮ್ಮ ನೀತಿ ನಿಯಮ ಮತ್ತು ಶುಲ್ಕ ವಿಚಾರದಲ್ಲಿ ಬದಲಾವಣೆಗೆ ಸಜ್ಜಾಗಿದೆ.

ದೂರಸಂಪರ್ಕ ಇಲಾಖೆಯ ಹೇಳಿಕೆ ಏನು?

ಏಕರೂಪವಾದ ನೀತಿಯನ್ನು ರಚಿಸಲು ಈ ನಿಯಮಗಳನ್ನು ಅಳವಡಿಸಿಕೊಳ್ಳುವಂತೆ ದೂರಸಂಪರ್ಕ ಇಲಾಖೆ (DoT) ಎಲ್ಲಾ ರಾಜ್ಯಗಳಿಗೆ ನಿರ್ದೇಶನವನ್ನು ನೀಡಿದೆ. ಇದಕ್ಕೆ ಸಂಬಂಧಿಸಿದ ಸೂಚನೆಯಲ್ಲಿ ಹೆಚ್ಚಿನ ಮಾಹಿತಿ ನೀಡಿರುವ ದೂರಸಂಪರ್ಕ ಇಲಾಖೆ (DoT)ಯ ಕಾರ್ಯದರ್ಶಿ ನೀರಜ್ ಮಿತ್ತಲ್ ಮತ್ತು ಏಕರೂಪದ RoW ನಿಯಮಗಳು ಟೆಲಿಕಾಂ ಮೂಲಸೌಕರ್ಯದ ಬೆಳವಣಿಗೆಯನ್ನು ಮತ್ತಷ್ಟು ವೇಗಗೊಳಿಸುತ್ತದೆ. ಅದೂ ಅಲ್ಲದೆ ಭಾರತದಲ್ಲಿ 5G ತಂತ್ರಜ್ಞಾನದ ವೇಗವಾಗಿ ನಿಯೋಜನೆಯನ್ನು ಕೂಡ ಸುಲಭಗೊಳಿಸುತ್ತದೆ ಎಂದು ಅವರು ತಿಳಿಸಿದ್ದಾರೆ. RoW ನಿಯಮಗಳು ಸಾರ್ವಜನಿಕ ಮತ್ತು ಖಾಸಗಿ ಆಸ್ತಿಗಳಲ್ಲಿ ಮೊಬೈಲ್ ಟವರ್‌ಗಳು ಮತ್ತು ಟೆಲಿಕಾಂ ಉಪಕರಣಗಳನ್ನು ಸ್ಥಾಪಿಸುವ ಮಾನದಂಡಗಳನ್ನು ರೂಪಿಸಲಿದೆ.

ಇದನ್ನು ಓದಿ: ಕೆಎಸ್​ಆರ್​ಟಿಸಿ, ಬಿಎಂಟಿಸಿ ಬೃಹತ್ ಮುಷ್ಕರ.!! ಈ ಬೇಡಿಕೆ ಈಡೇರಿಸುವಂತೆ ಎಚ್ಚರಿಕೆ

ನಿಯಮದಲ್ಲಿ ಸಾರ್ವಜನಿಕ ಸುರಕ್ಷತೆ, ಪಾರದರ್ಶಕತೆ ಮತ್ತು ಆಸ್ತಿ ಮಾಲೀಕರು ಮತ್ತು ಟೆಲಿಕಾಂ ಆಪರೇಟರ್‌ಗಳ ನಡುವಿನ ಸಮರ್ಥ ಸಮನ್ವಯದ ಅಗತ್ಯವನ್ನು ಒತ್ತಿಹೇಳಿದೆ. ಹೊಸ ನಿಯಮಗಳು ಅನುಮತಿಗಳನ್ನು ಪಡೆಯುವ ಪ್ರಕ್ರಿಯೆಯನ್ನು ಡಿಜಿಟೈಸ್ ಮಾಡುತ್ತದೆ. ಅಲ್ಲದೆ ವೇಗವಾದ ಮತ್ತು ಹೆಚ್ಚು ಪಾರದರ್ಶಕ ಅನುಮೋದನೆ ವ್ಯವಸ್ಥೆಯನ್ನು ಖಚಿತಪಡಿಸಲಿದೆ. ಹಿಂದೆ, ಟೆಲಿಕಾಂ ಕಂಪನಿಗಳು ರಾಜ್ಯಗಳಾದ್ಯಂತ RoW ನೀತಿಗಳಲ್ಲಿನ ಅಸಂಗತತೆಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ್ದವು. ಇದು ಟೆಲಿಕಾಂ ಮೂಲಸೌಕರ್ಯಗಳ ಅಭಿವೃದ್ಧಿಗೆ ಅಡ್ಡಿಯಾಗಿತ್ತು. ಹೊಸ ಏಕರೂಪದ ನಿಯಮಗಳು ಈ ಸಮಸ್ಯೆಗಳನ್ನು ಪರಿಹರಿಸಲು ಮತ್ತು ಟೆಲಿಕಾಂ ಪೂರೈಕೆದಾರರಿಗೆ ಸುಗಮ ವಿಸ್ತರಣೆಯನ್ನು ಉತ್ತೇಜಿಸುವ ಗುರಿಯನ್ನು ಹೊಂದಿವೆ.

ಭಾರತೀಯ ಕಂಪೆನಿಗಳಿಗೆ ಹೆಚ್ಚು ಪ್ರಯೋಜನ

ಪರಿಷ್ಕೃತವಾದ ನೀತಿಯು ವೇಗವಾಗಿ ಹಾಗೂ ಹೆಚ್ಚು ಪರಿಣಾಮಕಾರಿ ಮೂಲಸೌಕರ್ಯ ಅಭಿವೃದ್ಧಿಯನ್ನು ಸಕ್ರಿಯಗೊಳಿಸುವ ಮೂಲಕವಾಗಿ ಮುಖೇಶ್ ಅಂಬಾನಿ ನೇತೃತ್ವದ ಜಿಯೋ, ಸುನಿಲ್ ಮಿತ್ತಲ್ ಅವರ ನೇತೃತ್ವದ ಭಾರ್ತಿ ಏರ್‌ಟೆಲ್, Vi, ಹಾಗೂ BSNL ಸೇರಿದಂತೆ ಪ್ರಮುಖ ಟೆಲಿಕಾಂ ಕಂಪೆನಿಗಳಿಗೆ ಭಾರೀ ಗಮನಾರ್ಹವಾದ ಪ್ರಯೋಜನವನ್ನು ನೀಡಲಿದೆ ಎಂದು ನಿರೀಕ್ಷಿಸಲಾಗಿದೆ. ಸಂಪರ್ಕವನ್ನು ಹೆಚ್ಚಿಸುವಲ್ಲಿ ಮತ್ತು ಭಾರತದ ಡಿಜಿಟಲ್ ಲ್ಯಾಂಡ್‌ಸ್ಕೇಪ್ ಅನ್ನು ಹೆಚ್ಚಿಸುವಲ್ಲಿ ಇದು ನಿರ್ಣಾಯಕ ಹಂತವಾಗಿಯೂ ಕಂಡುಬರುತ್ತದೆ. ದೂರಸಂಪರ್ಕದ ಕಾಯಿದೆಯಡಿ ಇತ್ತೀಚೆಗೆ ಸೂಚಿಸಲಾದ ರೈಟ್ ಆಫ್ ವೇ (RoW) ನಿಯಮಗಳನ್ನು “ಕಡ್ಡಾಯವಾಗಿ” ಅನುಸರಿಸಲು ದೂರಸಂಪರ್ಕ ಇಲಾಖೆ (DoT) ರಾಜ್ಯಗಳನ್ನು ಕೇಳಿದೆ. ಅದರಲ್ಲೂ ಅಡಾಪ್ಶನ್‌ ಪ್ರಕ್ರಿಯೆಯ ಮೂಲಕವಾಗಿ ಹೋಗಲು ಅಗತ್ಯವಿಲ್ಲ ಎಂದು ಸಹ ತಿಳಿಸಿದೆ.

ನಿಯಮದಲ್ಲಿ ಭಾರೀ ಬದಲಾವಣೆ

ರೋ ನಿಯಮಗಳು ಪ್ರತೀ ರಾಜ್ಯಗಳಲ್ಲಿ ಭಿನ್ನವಾಗಿದ್ದು, ಅಲ್ಲದೆ ಅಳವಡಿಸಿಕೊಳ್ಳುವ ವಿಚಾರದಲ್ಲಿ ಸಹ ಅಡೆತಡೆಗಳನ್ನು ಹೊಂದಿತ್ತು. ಪರಿಣಾಮವನ್ನು ವಿವಿಧ ರಾಜ್ಯಗಳು ವಿಧಿಸುವ ಶುಲ್ಕಗಳು ಭಿನ್ನವಾಗಿರುತ್ತವೆ. ಆದ್ರೆ ಜನವರಿ 1 ರಿಂದ ಜಾರಿಗೆ ಬರುವಂತಹ ಹೊಸ ನಿಯಮಗಳನ್ನು ಎಲ್ಲಾ ರಾಜ್ಯಗಳು ಏಕರೂಪವಾಗಿ ಕಾರ್ಯಗತಗೊಳಿಸಬೇಕು, ಟೆಲಿಕಾಂ ಆಪರೇಟರ್‌ಗಳು ಮತ್ತು ಮೂಲಸೌಕರ್ಯ ಪೂರೈಕೆದಾರರಿಗೆ ಟೆಲಿಕಾಂ ಟವರ್‌ಗಳನ್ನು ನಿರ್ವಹಿಸಲು ಮತ್ತು ಸ್ಥಾಪಿಸಲು ಹಾಗೂ ಆಪ್ಟಿಕಲ್ ಫೈಬರ್ ಹಾಕುವಲ್ಲಿ ಉತ್ತೇಜನವನ್ನು ನೀಡುತ್ತದೆ. ಒಂದರ್ಥದಲ್ಲಿ ನೂತನ ನಿಯಮದಿಂದ ಇಡೀ ಭಾರತದಲ್ಲಿ ಒಂದೇ ರೀತಿಯ ವೆಚ್ಚ ಸೇರಿದಂತೆ ಹಲವು ವಿಧಗಳಲ್ಲಿ ಸಾರ್ವತ್ರಿಕ ಕಂಡುಬರಲಿದೆ ಎನ್ನಲಾಗಿದೆ. ಸದ್ಯ ಹಲವು ರಾಜ್ಯಗಳಲ್ಲಿ ಶುಲ್ಕವನ್ನು ಸೇರಿದಂತೆ ಅನೇಕ ರೂಪಗಳಲ್ಲಿ ಬದಲಾವಣೆಯನ್ನು ಇತ್ತು. ಮುಂದಿನ ವರ್ಷದಿಂದ ಇವುಗಳಲ್ಲಿ ಗಣನೀಯ ಪ್ರಮಾಣದಲ್ಲಿ ಬದಲಾವಣೆಯಾಗಲಿದೆ ಎನ್ನಲಾಗಿದೆ

ಇತರೆ ವಿಷಯಗಳು:

ಸಿಎಂನಿಂದ ಬಂತು ಖಡಕ್‌ ವಾರ್ನಿಂಗ್‌!! 20 ಲಕ್ಷಕ್ಕೂ ಅಧಿಕ ರೇಷನ್‌ ಕಾರ್ಡ್‌ ರದ್ದು

ಮತ್ತೆ ಸೋಲಿನ ಸರದಾರನಾದ ನಿಖಿಲ್‌ ಕುಮಾರ್‌ ಸ್ವಾಮಿ.! ಈ ಸೋಲಿಗೆ ಕಾರಣ ಏನು?

Leave a Comment

rtgh