ಜ.1 ಹೊಸ ಮಾರ್ಗಸೂಚಿ.! ಟ್ರಾಯ್ ನಿಂದ ಅಧಿಕೃತ ಅಧಿಸೂಚನೆ ಪ್ರಕಟ

ಹಲೋ ಸ್ನೇಹಿತರೆ, ಗ್ರಾಹಕರಿಗೆ ಇತ್ತಿಚಿನ ದಿನಗಳಲ್ಲಿ ಬರುತ್ತಿರುವ ಅನಪೇಕ್ಷಿತ ಕರೆಗಳು ಮತ್ತು ಸಂದೇಶಗಳಿಂದಾಗುತ್ತಿರುವ ತೊಂದರೆ ತಪ್ಪಿಸುವ ಬಗ್ಗೆ ಜನವರಿಯಲ್ಲಿ ಹೊಸ ಮಾರ್ಗಸೂಚಿಯನ್ನು ಬಿಡುಗಡೆ ಮಾಡಲಾಗುವುದು ಎಂದು ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವಾಲಯದ ಕಾರ್ಯದರ್ಶಿ ನಿಧಿ ಖರೆ ತಿಳಿಸಿದ್ದಾರೆ.

trai Guideline

ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಕರಡು ನಿಯಮಾವಳಿಗಳನ್ನು ಈಗಾಗಲೇ ಸಿದ್ಧಪಡಿಸಲಾಗಿದೆ. ಇದನ್ನು ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರದ (ಟ್ರಾಯ್‌) ನಿಯಮಾವಳಿಗಳೊಂದಿಗೆ ಸಮನ್ವಯಗಳಿಸಿದ ಬಳಿಕ ಅಧಿಕೃತವಾಗಿ ಪ್ರಕಟಿಸಲಾಗುವುದು’ ಎಂದು ತಿಳಿಸಿದರು.

ಟ್ರಾಯ್‌ ಅಧ್ಯಕ್ಷ ಅನಿಲ್‌ ಕುಮಾರ್‌ ಲಹೋಟಿ ಮಾತನಾಡಿ, ‘ಗ್ರಾಹಕ ಸಚಿವಾಲಯವು ರೂಪಿಸಿರುವ ಮಾರ್ಗಸೂಚಿಗಳು ದೂರಸಂಪರ್ಕ ಕಂಪನಿಗಳ ಪಾತ್ರ ಹಾಗೂ ಜವಾಬ್ದಾರಿಗೆ ಮಾತ್ರ ಸೀಮಿತವಾಗಿವೆ. ಗ್ರಾಹಕರು ನೀಡುವ ದೂರುಗಳ ಆಧಾರದ ಮೇಲೆ ಪ್ರಾಧಿಕಾರವು ಪ್ರತ್ಯೇಕವಾಗಿ ನಿಯಮಾವಳಿಗಳನ್ನು ರೂಪಿಸಲಿದೆ’ ಎಂದರು.

ಗ್ರಾಹಕ ಹಿತಾಸಕ್ತಿ ಕಾಪಾಡುವ ದೃಷ್ಟಿಯಿಂದ ಹಾಲಿ ಇರುವ ನಿಯಮಾವಳಿಗಳನ್ನು ಮತ್ತಷ್ಟು ಸದೃಢಗೊಳಿಸಲು ಟ್ರಾಯ್‌ ನೇತೃತ್ವದಡಿ ಜಂಟಿ ಸಮಿತಿ ರಚಿಸಲಾಗಿದೆ.

ಇತರೆ ವಿಷಯಗಳು:

ನೌಕರರಿಗೆ ಗುಡ್ ನ್ಯೂಸ್..! ಹಳೆ ಪಿಂಚಣಿ ಯೋಜನೆ ಮತ್ತೆ ಜಾರಿ

ಯಶಸ್ವಿನಿ ಯೋಜನೆಯಡಿ ಸರ್ಕಾರದ ಹೊಸ ಆದೇಶ! ಹೊಸ ಸದಸ್ಯರು ಇಂದೇ ನೊಂದಣಿ ಮಾಡಿ

Leave a Comment

rtgh