ಯಶಸ್ವಿನಿ ಯೋಜನೆಯಡಿ ಸರ್ಕಾರದ ಹೊಸ ಆದೇಶ! ಹೊಸ ಸದಸ್ಯರು ಇಂದೇ ನೊಂದಣಿ ಮಾಡಿ

ಹಲೋ ಸ್ನೇಹಿತರೆ, 2024-25 ನೇ ಸಾಲಿಗೆ ಯಶಸ್ವಿನಿ ಆರೋಗ್ಯ ರಕ್ಷಣಾ ಯೋಜನೆಯನ್ನುಜಾರಿಗೊಳಿಸಲು ಮತ್ತು ಈ ಯೋಜನೆಯಡಿ ಹೊಸ ಸದಸ್ಯರನ್ನು ತಮ್ಮ ಹೆಸರನ್ನು ನೋಂದಾಯಿಸಲು ರಾಜ್ಯ ಸರಕಾರದಿಂದ ಹೊಸ ಆದೇಶವನ್ನು ಪ್ರಕಟಿಸಲಾಗಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯಲು ಈ ಲೇಖನವನ್ನು ಕೊನೆವರೆಗೂ ಓದಿ.

Yashasvini Health Scheme

ಯಾರೂ ಅರ್ಜಿ ಸಲ್ಲಿಸಬಹುದು?

ಯಾವುದೇ ಸಹಕಾರ ಸಂಘ / ಬ್ಯಾಂಕುಗಳ ಸದಸ್ಯರು ಅಥವಾ ಸಹಕಾರಿ ಸ್ವ-ಸಹಾಯ ಗುಂಪುಗಳ ಸದಸ್ಯರಾಗಿ ಒಂದು ತಿಂಗಳು ಪೂರ್ಣಗೊಂಡಿದ್ದಲ್ಲಿ ಅಂತಹ ಸದಸ್ಯರು ಅಥವಾ ಕರ್ನಾಟಕ ಸಹಕಾರ ಸಂಘಗಳ ಕಾಯ್ದೆ 1959ರಡಿ ನೋಂದಣಿಯಾಗಿ ಕಾರ್ಯನಿರತ ಸಹಕಾರ ಸಂಘಗಳಲ್ಲಿ ಕನಿಷ್ಠ ಮೂರು ವರ್ಷ ಸೇವೆ ಪೂರ್ಣಗೊಳಿಸಿರುವಂತಹವರು ಹಾಗೇ ಮಾಸಿಕ ರೂ.30,000/- ಮತ್ತು ಅದಕ್ಕಿಂತ ಕಡಿಮೆ ಒಟ್ಟು ವೇತನ ಪಡೆಯುತ್ತಿರುವ ನೌಕರರು ಮತ್ತು ಅವರ ಅರ್ಹ ಕುಟುಂಬ ಸದಸ್ಯರು ನಿಗದಿತ ವಾರ್ಷಿಕ ವಂತಿಗೆಯನ್ನು ಪಾವತಿಸಿ ಯಶಸ್ವಿನಿ ಯೋಜನೆಯಡಿ ಸದಸ್ಯರಾಗಲು ಅರ್ಹರಿರುತ್ತಾರೆ.

ಯೋಜನೆಯಡಿ ನೋಂದಣಿ ಮಾಡಿಕೊಳ್ಳಲು ಪ್ರಮುಖ ದಿನಾಂಕಗಳು:

ಅರ್ಜಿ ಸಲ್ಲಿಕೆ ಪ್ರಾರಂಭ ದಿನಾಂಕ: 01 ಡಿಸೆಂಬರ್ 2024

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 31 ಡಿಸೆಂಬರ್ 2024

ನೋಂದಣಿ ಶುಲ್ಕ:

  • ನಾಲ್ಕು ಜನ ಇರುವ ಕುಟುಂಬಕ್ಕೆ ವಾರ್ಷಿಕ ರೂ.500/-ಗಳ ವಂತಿಗೆ ಮತ್ತು ನಾಲ್ಕಕ್ಕಿಂತ ಹೆಚ್ಚಿನ ಸದಸ್ಯರುಗಳ ಕುಟುಂಬಕ್ಕೆ ರೂ.1000/- ಗಳನ್ನು ಪಾವತಿಸತಕ್ಕದ್ದು,
  • ನಗರ ಸಹಕಾರ ಸಂಘಗಳ ಗರಿಷ್ಠ ನಾಲ್ಕು ಸದಸ್ಯರ ಕುಟುಂಬಕ್ಕೆ ವಾರ್ಷಿಕ ರೂ.1000/- ಗಳ ವಂತಿಗೆ ಮತ್ತು ನಾಲ್ಕಕ್ಕಿಂತ ಹೆಚ್ಚಿನ ಸದಸ್ಯರುಗಳ ಕುಟುಂಬದ ಪ್ರತಿಯೊಬ್ಬ ಹೆಚ್ಚುವರಿ ಸದಸ್ಯರಿಗೆ ರೂ.200/-ಗಳನ್ನು ಪಾವತಿಸದ್ದು.
  • ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ಸದಸ್ಯರಿಗೆ ವಿಶೇಷ ಘಟಕ ಯೋಜನೆ ಹಾಗೂ ಗಿರಿಜನರಿಗೆ ವಂತಿಗೆಯನ್ನು ಸರ್ಕಾರವೇ ಭರಿಸುತ್ತದೆ.

ನೋಂದಣಿಯನ್ನು ಎಲ್ಲಿ ಮಾಡಿಕೊಳ್ಳಬೇಕು?

ಅರ್ಹ ಅರ್ಜಿದಾರರು ಅಗತ್ಯ ದಾಖಲಾತಿಗಳ ಜೊತೆ ನಿಮ್ಮ ಹತ್ತಿರದ ಸಹಕಾರಿ ಸಂಘದ ಕಚೇರಿಯನ್ನು ಭೇಟಿ ಮಾಡಿ ಅರ್ಜಿ ಸಲ್ಲಿಸಬೇಕು.

ಯಾವೆಲ್ಲ ಸೌಲಭ್ಯವನ್ನು ಪಡೆಯಬಹುದು?

  • ಯಶಸ್ವಿನಿ ಯೋಜನೆಯಡಿಯಲ್ಲಿ ಟ್ರಸ್ಟ್ ಗುರುತಿಸಿರುವ 1650 ವಿವಿಧ ಚಿಕಿತ್ಸೆಗಳು ಮತ್ತು 478 ICU ಚಿಕಿತ್ಸೆಗಳೂ ಸೇರಿದಂತೆ ಒಟ್ಟು 2128 ಚಿಕಿತ್ಸೆಗಳನ್ನು ಅಳವಡಿಸಿಕೊಳ್ಳಲಾಗಿದೆ.
  • ರೋಗಿಗಳಿಗೆ ಸದರಿ ಚಿಕಿತ್ಸಾ ಸೌಲಭ್ಯಗಳನ್ನು ರಾಜ್ಯದಲ್ಲಿ ನೋಂದಾಯಿಸಿದ ಯಶಸ್ಸಿನಿ ನೆಟ್‌ವರ್ಕ್ ಆಸ್ಪತ್ರೆಗಳಲ್ಲಿ ಒದಗಿಸಲಾಗುವುದು.
  • ಎರಡು ಹೆರಿಗೆಗೆ ಮಾತ್ರ ಯಶಸ್ವಿನಿ ಯೋಜನೆಯಲ್ಲಿ ಸೌಲಭ್ಯ ದೊರೆಯುತ್ತದೆ.
  • ಯಶಸ್ವಿನಿ ಯೋಜನೆಯ ಪ್ರೋಟೋಕಾಲ್ ಪ್ರಕಾರ ಯಶಸ್ವಿನಿ ಫಲಾನುಭವಿಗಳು ಜನರಲ್ ವಾರ್ಡನಲ್ಲಿ ಮಾತ್ರ ಚಿಕಿತ್ಸೆ ಪಡೆಯಲು ಅರ್ಹರಿರುತ್ತಾರೆ. ಉನ್ನತ ವಾರ್ಡ್/ಸ್ಪೆಷಲ್ ವಾರ್ಡಿಗೆ ಆಗುವ ಹೆಚ್ಚುವರಿ ವ್ಯತ್ಯಾಸದ ಚಿಕಿತ್ಸಾ ಮೊತ್ತವನ್ನುಸದರಿ ಫಲಾನುಭವಿಗಳೇ ಭರಿಸತಕ್ಕದ್ದು.

ಇತರೆ ವಿಷಯಗಳು:

ಮಹಿಳಾ ಸರ್ಕಾರಿ ನೌಕರರಿಗೆ ಹೊಸ ರಜೆ ನೀತಿ ಜಾರಿ!

ಬಂಗಾರದ ಬೆಲೆ ಗಗನಕ್ಕೆ ಏರಿಕೆ.!! ಇಂದಿನ ರೇಟ್ ಕೇಳಿ ದಂಗಾದ ಜನ

Leave a Comment

rtgh