ಯಶಸ್ವಿನಿ ಆರೋಗ್ಯ ರಕ್ಷಣಾ ಯೋಜನೆ ನೋಂದಣಿ ಆರಂಭ.!! ಇಂದೇ ಅಪ್ಲೇ ಮಾಡಿ

ಹಲೋ ಸ್ನೇಹಿತರೇ, ರಾಜ್ಯದಲ್ಲಿ ಸಹಕಾರ ಸಂಘಗಳ ಸದಸ್ಯರಾಗಿರುವ ರೈತರಿಗೆ ‘ಯಶಸ್ವಿನಿ ಆರೋಗ್ಯ ರಕ್ಷಣಾ ಯೋಜನೆ’ಯನ್ನು ನೀಡಲಾಗುತ್ತಿದೆ. ಈ ಯೋಜನೆಯನ್ನು 2024-25ನೇ ಸಾಲಿಗೂ ಮುಂದುವರೆಸಲು ಅನುವಾಗುವಂತೆಹ ಸದಸ್ಯರ ನೋಂದಣಿಯನ್ನು ಪ್ರಾರಂಭಿಸಲು ಸರ್ಕಾರವು ಮಾರ್ಗಸೂಚಿಯನ್ನು ಹೊರಡಿಸಿದೆ.

Yeshasvini Health Care Scheme Registration begins
Yeshasvini Health Care Scheme Registration begins

ಏನಿದು ಯೋಜನೆ?

ಯಶಸ್ಸಿನಿ ವಿಮಾ ಯೋಜನೆಯಲ್ಲ. ಇದೊಂದು ಸ್ವಯಂ ನಿಧಿ ಸಹಕಾರ ಸಂಘಗಳ ಯೋಜನೆ. ಸಹಕಾರದ ಸಂಘಗಳ ಸದಸ್ಯರು ನಿಗದಿತವಾದ ವಾರ್ಷಿಕ ವಂತಿಗೆ ಪಾವತಿಸಿದ ಯೋಜನೆಯನ್ನು ಪಡೆದುಕೊಳ್ಳುತ್ತಾರೆ. ರಾಜ್ಯ ಸರ್ಕಾರದ ಬಜೆಟ್‌ ನಲ್ಲಿ ಇದಕ್ಕಾಗಿ ಅನುದಾನವನ್ನು ಒದಗಿಸಿದೆ.

ಮಾನದಂಡವೇನು?

  • 75 ವರ್ಷಕ್ಕಿಂತ ಕಡಿಮೆಯಾದ ವಯಸ್ಸಿನವರು ಈ ಯೋಜನೆಗೆ ಅರ್ಜಿಯನ್ನು ಸಲ್ಲಿಸಲು ಅರ್ಹರು.
  • ಅರ್ಜಿದಾರರು ಅರ್ಜಿಯನ್ನು ಪ್ರಕ್ರಿಯೆಗೆ ಕನಿಷ್ಠ 3 ತಿಂಗಳ ಮೊದಲು ಕರ್ನಾಟಕದ ಸಹಕಾರಿ ಸಂಘದ ಸದಸ್ಯರಾಗಿರಬೇಕು.
  • ಸದಸ್ಯರ ಪತ್ನಿ ಮತ್ತು ಪೋಷಕರು ಹಾಗೂ ಮಕ್ಕಳು ಸಹ ಈ ಯೋಜನೆಯ ಪ್ರಯೋಜನಗಳನ್ನು ಪಡೆಯಬಹುದು.

ಷರತ್ತುಗಳು:

  • ಡಿಸೆಂಬರ್ 1ರಿಂದ ಆರಂಭವಾಗಿರುವ ನೋಂದಣಿ ಪ್ರಕ್ರಿಯೆ, ಡಿಸೆಂಬರ್ 31ರವರೆಗೆ ಮುಂದುವರೆಯಲಿದೆ.
  • ನೋಂದಣಿಯಾದ ಸದಸ್ಯರಿಗೆ ಯೂನಿಕ್ ಆದ ಐಡಿ ಸಂಖ್ಯೆಯುಳ್ಳ ಕಾರ್ಡ್‌ ಅನ್ನು ಮುಂದಿನದಾದ ವರ್ಷದ ಮಾರ್ಚ್1ರಿಂದ ವಿತರಣೆಯನ್ನು ಮಾಡಲಾಗುತ್ತದೆ.
  • 2025ರ ಏಪ್ರಿಲ್ 1ರಿಂದ ಫಲಾನುಭವಿಗಳು ನಗದುರಹಿತ ಚಿಕಿತ್ಸೆ ಪಡೆಯಬಹುದು.
  • ಗುರುತಿನ ಚೀಟಿಯನ್ನು ನೆಟ್‌ವರ್ಕ್ ಆಸ್ಪತ್ರೆಗಳಿಗೆ ಭೇಟಿ ನೀಡಿದ ವೇಳೆ ಕಡ್ಡಾಯವಾಗಿ ತೋರಿಸಬೇಕು.

ಇದನ್ನು ಓದಿ: ಮಹಿಳಾ ಸರ್ಕಾರಿ ನೌಕರರಿಗೆ ಹೊಸ ರಜೆ ನೀತಿ ಜಾರಿ!

ಯಾರು ಅರ್ಹರು?

ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಯಾವುದೇ ಸಹಕಾರ ಸಂಘ ಬ್ಯಾಂಕ್ ಗಳು (ಗ್ರಾಮೀಣ ಮತ್ತು ನಗರ ಸಹಕಾರ ಸಂಘಗಳು ಒಳಗೊಂಡಂತೆ) ಸದಸ್ಯರು ಅಥವಾ ಸಹಕಾರಿ ಸ್ವ-ಸಹಾಯ ಗುಂಪುಗಳ ಸದಸ್ಯರು, ಸದಸ್ಯರಾಗಿ ಒಂದು ತಿಂಗಳು ಪೂರ್ಣಗೊಂಡಿದ್ದಲ್ಲಿ ಅಂತಹ ಸದಸ್ಯರು ನಿಗದಿತ ವಾರ್ಷಿಕ ವಂತಿಗೆ ಪಾವತಿಸಿ ಯೋಜನೆಯಡಿ ಸದಸ್ಯರಾಗಲು ಅರ್ಹರು.

ಕರ್ನಾಟಕ ಸಹಕಾರ ಸಂಘಗಳ ಕಾಯ್ದೆಯಡಿ ನೋಂದಣಿಯಾಗಿ ಕಾರ್ಯನಿರತ ಸಹಕಾರ ಸಂಘಗಳಲ್ಲಿ ಕನಿಷ್ಠ 3 ವರ್ಷ ಸೇವೆ ಪೂರ್ಣಗೊಳಿಸಿ ಮಾಸಿಕ 30 ಸಾವಿರ ರೂ.ಕ್ಕಿಂತ ಕಡಿಮೆ ವೇತನವನ್ನು ಪಡೆಯುತ್ತಿರುವ ನೌಕರರು ಹಾಗೂ ಅವರ ಅರ್ಹ ಕುಟುಂಬ ಸದಸ್ಯರು ನೋಂದಣಿಯನ್ನು ಮಾಡಿಕೊಳ್ಳಬಹುದು.

ಸರ್ಕಾರದ ಎಚ್ಚರಿಕೆ

2024-25ನೇ ಸಾಲಿಗೆ ಈ ಯೋಜನೆ ಅಡಿ ಗ್ರಾಮೀಣ ಸಹಕಾರ ಸಂಘಗಳ/ಸ್ವಸಹಾಯದ ಗುಂಪುಗಳ ಗರಿಷ್ಠ ನಾಲ್ಕು ಸದಸ್ಯರ ಕುಟುಂಬವನ್ನು ಒಂದಕ್ಕೆ ವಾರ್ಷಿಕ 500 ರೂ.ಗಳ ವಂತಿಗೆ ಹಾಗೂ ನಾಲ್ಕಕ್ಕಿಂತ ಹೆಚ್ಚಿನ ಸದಸ್ಯರುಗಳ ಕುಟುಂಬದ ಪ್ರತಿಯೊಬ್ಬ ಹೆಚ್ಚುವರಿಯಾದ ಸದಸ್ಯರಿಗೆ 100 ರೂ. ಪಾವತಿಸಬೇಕು. ನಗರ ಸಹಕಾರ ಸಂಘಗಳ ಗರಿಷ್ಠ ನಾಲ್ಕು ಸದಸ್ಯರ ಕುಟುಂಬ ಒಂದಕ್ಕೆ ವಾರ್ಷಿಕ 1000 ರೂ.ಗಳ ವಂತಿಗೆ ಮತ್ತು ನಾಲ್ಕಕ್ಕಿಂತ ಹೆಚ್ಚಿನ ಸದಸ್ಯರುಗಳ ಕುಟುಂಬದ ಪ್ರತಿಯೊಬ್ಬ ಹೆಚ್ಚುವರಿಯಾದ ಸದಸ್ಯರಿಗೆ 200 ರೂ. ಪಾವತಿಸಬೇಕು. ಪ್ರಸ್ತುತ ಯಶಸ್ವಿನಿ ಯೋಜನೆ ಅಡಿಯಲ್ಲಿ ಗುರುತಿಸಿದ 1650 ವಿವಿಧ ಚಿಕಿತ್ಸೆಗಳು ಹಾಗೂ 478 ಐಸಿಯು ಚಿಕಿತ್ಸೆಗಳೂ ಸೇರಿದಂತೆ ಒಟ್ಟು 2,128 ಚಿಕಿತ್ಸೆಗಳಿಗೆ ನಗದುರಹಿತವಾದ ಸೌಲಭ್ಯವನ್ನು ಸಿಗಲಿದೆ.

ಇತರೆ ವಿಷಯಗಳು:

ಇನ್ಮುಂದೆ ಆಸ್ಪತ್ರೆ ಬಿಲ್ ಬರೋದೆ ಇಲ್ಲ.!! ‘ಆಧಾರ್’ ಇದ್ರೆ ಸಿಗುತ್ತೆ 5 ಲಕ್ಷ ರೂ.

ರಾಜ್ಯದ ಜನತೆಗೆ ಮತ್ತೊಂದು ಶಾಕ್.!! ‘ಕಾವೇರಿ’ ನೀರಿನ ದರ ಏರಿಕೆ

Leave a Comment

rtgh